ಕೊಚ್ಚಿ: ಶಾಲಾ ಚಟುವಟಿಕೆ ದಿನ ಕಡಿತಕ್ಕೆ ಸಂಬಂಧಿಸಿದ ಅರ್ಜಿಯ ಕುರಿತು ಹೈಕೋರ್ಟ್ ಸರ್ಕಾರದಿಂದ ವಿವರಣೆ ಕೇಳಿದೆ.
ಹತ್ತು ದಿನಗಳಲ್ಲಿ ವಿವರಣೆ ನೀಡುವಂತೆ ನ್ಯಾಯಮೂರ್ತಿ ಬಸಂತ್ ಬಾಲಾಜಿ ಸೂಚಿಸಿದ್ದಾರೆ. ಶಿಕ್ಷಣ ಕ್ಯಾಲೆಂಡರ್ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯ ಮೇರೆಗೆ ಹೈಕೋರ್ಟ್ ಸರ್ಕಾರದಿಂದ ವರದಿ ಕೇಳಿದೆ.
2023-2024 ರ ಶೈಕ್ಷಣಿಕ ವರ್ಷದಲ್ಲಿ, ಶಾಲಾ ಶಿಕ್ಷಣ ಕ್ಯಾಲೆಂಡರ್ ಪ್ರಕಾರ ಕೆಲಸದ ದಿನಗಳನ್ನು 210 ಕ್ಕೆ ಹೆಚ್ಚಿಸಲಾಗಿತ್ತು. ನಂತರ ಶಿಕ್ಷಕರ ಸಂಘಗಳ ವಿರೋಧದ ಹಿನ್ನೆಲೆಯಲ್ಲಿ ಅದನ್ನು 205ಕ್ಕೆ ಇಳಿಸಲಾಯಿತು. ಕೆಲಸದ ದಿನವನ್ನು ಮೊಟಕುಗೊಳಿಸುವುದರಿಂದ ವಿದ್ಯಾರ್ಥಿಗಳ ಅಧ್ಯಯನದ ಗುಣಮಟ್ಟದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಮುವಾಟ್ಟುಪುಳ ಎಬಿನೇಜರ್ ಹೈಯರ್ ಸೆಕೆಂಡರಿ ಶಾಲೆ ಸಲ್ಲಿಸಿರುವ ಅರ್ಜಿಯಲ್ಲಿ ನ್ಯಾಯಾಲ ಮಧ್ಯಪ್ರವೇಶಿಸಿತು. ಕೆಲಸದ ದಿನವನ್ನು ಮೊಟಕುಗೊಳಿಸಿರುವುದು ಕೇರಳ ಶಿಕ್ಷಣ ಕಾಯ್ದೆಗೆ ವಿರುದ್ಧವಾಗಿದ್ದು, ಪಠ್ಯಕ್ರಮವನ್ನು ಪೂರ್ಣಗೊಳಿಸಲು ಪರಿಷ್ಕøತ ದಿನಗಳು ಸಾಕಾಗುವುದಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.