ಡೆಹ್ರಾಡೂನ್ (PTI): 'ಡೆಹ್ರಾಡೂನ್ ಜಿಲ್ಲೆಯ ಮದರ್ಸು ಮಜ್ರಾ ಜಖಾನ್ ಎಂಬ ಗ್ರಾಮದಲ್ಲಿ ಭೂ ಕುಸಿತ ಉಂಟಾಗಿದ್ದು, 12 ಮನೆಗಳಿಗೆ ಹಾನಿಯಾಗಿದೆ' ಎಂದು ಉತ್ತರಾಖಂಡದ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ ಶುಕ್ರವಾರ ತಿಳಿಸಿದೆ.
ಡೆಹ್ರಾಡೂನ್ (PTI): 'ಡೆಹ್ರಾಡೂನ್ ಜಿಲ್ಲೆಯ ಮದರ್ಸು ಮಜ್ರಾ ಜಖಾನ್ ಎಂಬ ಗ್ರಾಮದಲ್ಲಿ ಭೂ ಕುಸಿತ ಉಂಟಾಗಿದ್ದು, 12 ಮನೆಗಳಿಗೆ ಹಾನಿಯಾಗಿದೆ' ಎಂದು ಉತ್ತರಾಖಂಡದ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ ಶುಕ್ರವಾರ ತಿಳಿಸಿದೆ.
'ವಿಕಾಸನಗರ ಪ್ರದೇಶದ ಈ ಗ್ರಾಮದಲ್ಲಿ ಬುಧವಾರವೂ ಭೂಕುಸಿತ ಸಂಭವಿಸಿತ್ತು.
'ಭಾಗಶಃ ಹಾನಿಯಾದ ಮನೆಗಳು ವಾಸಿಸಲು ಯೋಗ್ಯವಾಗಿಲ್ಲ. ಅಲ್ಲಿನ ಜನರನ್ನು ಪಾಸ್ತಾದ ಕಿರಿಯ ಪ್ರೌಢಶಾಲೆಯಲ್ಲಿ ನಿರ್ಮಿಸಲಾಗಿರುವ ತಾತ್ಕಾಲಿಕ ನಿರಾಶ್ರಿತ ಶಿಬಿರಕ್ಕೆ ಕಳುಹಿಸಲಾಗಿದೆ' ಎಂದು ವಿಕಾಸನಗರದ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ವಿನೋದ್ ಕುಮಾರ್ ಅವರು ಮಾಹಿತಿ ನೀಡಿದರು.