ಮಡಗಾಸ್ಕರ್: ಕಾಲ್ತುಳಿತವೊಂದರಲ್ಲಿ ಕನಿಷ್ಠ 12 ಜನರು ಮೃತಪಟ್ಟು, 80 ಜನರು ಗಾಯಗೊಂಡಿರುವ ಘಟನೆ ಮಡಗಾಸ್ಕರ್ದ ಅಂಟಾನಾನರಿವೊ ಎಂಬಲ್ಲಿ ನಡೆದಿದೆ.
ಇಂಡಿಯನ್ ಓಷನ್ ಐಲ್ಯಾಂಡ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭಕ್ಕಾಗಿ ಕ್ರೀಡಾಭಿಮಾನಿಗಳು ರಾಷ್ಟ್ರೀಯ ಕ್ರೀಡಾಂಗಣಕ್ಕೆ ಪ್ರವೇಶಿಸಲು ಪ್ರಯತ್ನಿಸಿದಾಗ ಕಾಲ್ತುಳಿತ ಸಂಭವಿಸಿದ್ದು, ಗಾಯಗೊಂಡವರಲ್ಲಿ 11 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಮಡಗಾಸ್ಕರ್ದ ಪ್ರಧಾನಿ ಕ್ರಿಶ್ಚಿಯನ್ ಎನ್ಟ್ಸೆ ಹೇಳಿದ್ದಾರೆ.ವಿದೇಶಿ ಮಾಧ್ಯಮ ಅಲ್ ಜಜೀರಾ, ಬರಿಯಾ ಸ್ಟೇಡಿಯಂನ ನಡೆದ ಹಿಂದೂ ಮಹಾಸಾಗರ ದ್ವೀಪದ ಕ್ರೀಡಾಕೂಟದ ಸಮಾರಂಭದಲ್ಲಿ ಪಾಲ್ಗೊಳ್ಳಲು ಅಪಾರ ಜನರು ಸೇರಿದ್ದರು. ಈ ವೇಳೆ ಪ್ರವೇಶದ್ವಾರದ ಬಳಿ ದೊಡ್ಡ ಕಾಲ್ತುಳಿತ ನಡೆದಿದೆ ಎನ್ನಲಾಗಿದ್ದು, ಆದರ ಇದಕ್ಕೆ ನಿಖರ ಕಾರಣ ಸ್ಪಷ್ಟವಾಗಿಲ್ಲ ಎಂದು ವರದಿ ಮಾಡಿದೆ.
ಈ ಮಾರಣಾಂತಿಕ ಘಟನೆಯಲ್ಲಿ ಜನರರು ಜನರು ತಮ್ಮ ಬೂಟುಗಳನ್ನು ಮತ್ತು ಕಳೆದುಹೋದ ವಸ್ತುಗಳನ್ನು ಹುಡುಕಲು ಪ್ರಯತ್ನಿಸುತ್ತಿರುವ ದೃಶ್ಯ ಕಂಡುಬಂದಿದ್ದು, ಕ್ರೀಡಾಂಗಣದ ಒಳಗಿನ ಇತರ ಚಿತ್ರಗಳನ್ನು ಸಾಮಾಜಿಕ ಜಾಲಾತಾಣದಲ್ಲಿ ಹಂಚಿಕೊಳ್ಳಲಾಗಿದ್ದು, ಈ ಹಿಂದೆ 2019ರಲ್ಲಿ ಮಹಾಮಸಿನಾ ಕ್ರೀಡಾಂಗಣದಲ್ಲಿ ನಡೆದ ಇದೇ ರೀತಿಯ ಘಟನೆಯಲ್ಲಿ ಕನಿಷ್ಠ 15 ಜನರು ಮೃತಪಟ್ಟಿದ್ದರು.