ತಿರುವನಂತಪುರಂ: ಇನ್ನು ಮುಂದೆ 12ನೇ ತರಗತಿಗೆ ಸಾರ್ವಜನಿಕ ಪರೀಕ್ಷೆ ಸಾಕು(ಪಬ್ಲಿಕ್ ಪರೀಕ್ಷೆ) ಎಂದು ರಾಜ್ಯ ಸರ್ಕಾರ ಹೇಳಿದೆ. ಶಾಲಾ ಪಠ್ಯಕ್ರಮದ ಕೊನೆಯ ಹಂತವಾದ ಹನ್ನೆರಡನೇ ತರಗತಿಯಲ್ಲಿ ಮಾತ್ರ ವಾರ್ಷಿಕ ಪಬ್ಲಿಕ್ ಪರೀಕ್ಷೆ ಸಾಕು ಎಂದು ಸರ್ಕಾರ ಶಿಫಾರಸು ಮಾಡುತ್ತದೆ.
ಶಾಲಾ ಪಠ್ಯಕ್ರಮದ ಸುಧಾರಣಾ ಚೌಕಟ್ಟಿನ ಭಾಗವಾಗಿ ಈ ಪ್ರಸ್ತಾವನೆ ನೀಡಲಾಗಿದೆ. ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ರದ್ದುಪಡಿಸಬೇಕು ಮತ್ತು ಪಬ್ಲಿಕ್ ಪರೀಕ್ಷೆಯನ್ನು 12 ನೇ ತರಗತಿಯಲ್ಲಿ ಮಾತ್ರ ನಡೆಸಬೇಕು ಎಂದು ಸರ್ಕಾರ ಶಿಫಾರಸು ಮಾಡಿದೆ.
ಎಸ್.ಸಿ.ಇ.ಆರ್.ಟಿ. ನೇತೃತ್ವದಲ್ಲಿ ಸಿದ್ಧಪಡಿಸಲಾದ ಕರಡು ಚೌಕಟ್ಟಿನಲ್ಲಿ ಪ್ರಸ್ತಾವನೆಗಳನ್ನು ನಿರ್ದಿಷ್ಟಪಡಿಸಲಾಗಿದೆ. ಶೀಘ್ರದಲ್ಲೇ ಸರ್ಕಾರ ಈ ವಿವರಗಳನ್ನು ಬಿಡುಗಡೆ ಮಾಡಲಿದೆ ಎಂದು ವರದಿಯಾಗಿದೆ. ಶಿಫಾರಸನ್ನು ಅಂಗೀಕರಿಸಿದರೆ, ಪಠ್ಯಕ್ರಮ ಮತ್ತು ಪುಸ್ತಕಗಳ ತಯಾರಿಕೆ ಸೇರಿದಂತೆ ಪ್ರಮುಖ ಬದಲಾವಣೆಗಳಾಗುವ ಸಾಧ್ಯತೆಯಿದೆ.