ಕುಂಬಳೆ: ಪೆರ್ಮುದೆ ಲಾರೆನ್ಸ್ ನಗರದ ಸೈಂಟ್ ಲಾರೆನ್ಸ್ ದಿ ಮಾರ್ಟಿರ್ ಇಗರ್ಜಿಯಲ್ಲಿ ಆ. 13ರಂದು ಸಾಂತಾ ಲಾರೆನ್ಸಾರ ವಾರ್ಷಿಕ ಮಹೋತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ವಾರ್ಷಿಕ ಮಹೋತ್ಸವದ ಅಂಗವಾಗಿ ಒಂಬತ್ತು ದಿನಗಳ ನೊವೆನಾ ಹಾಗೂ ದಿವ್ಯಬಲಿಪೂಜೆ ಆರಂಭಗೊಂಡಿದ್ದು, ಆ. 12ರ ವರೆಗೆ ಸಂಜೆ 5.45ಕ್ಕೆ ನಡೆಯಲಿದೆ.
ಆ. 13ರಂದು ಬೆಳಿಗ್ಗೆ 10.45ಕ್ಕೆ ಇಗರ್ಜಿ ಪರಿಸರದಲ್ಲಿ ನಿರ್ಮಿಸಲಾದ ಸಾಂತಾ ಲಾರೆನ್ಸಾರ ಗ್ರೋಟ್ಟೋ ಆಶೀರ್ವಚನ, 11 ಗಂಟೆಗೆ ಸಂಭ್ರಮಿಕ ದಿವ್ಯಬಲಿಪೂಜೆ ನೆರವೇರಲಿದೆ. ಕಾಸರಗೋಡು ಧರ್ಮವಲಯದ ಪ್ರಧಾನ ಧರ್ಮಗುರು ವಂ. ಫಾ. ಸ್ಟ್ಯಾನಿ ಪಿರೇರಾ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಪೆರ್ಮುದೆ ಇಗರ್ಜಿಯ ಧರ್ಮಗುರು ವಂ. ಫಾ. ಮೆಲ್ವಿನ್ ಫೆರ್ನಾಂಡಿಸ್, ಫಾ. ಕ್ಲೌಡ್, ಕಾಸರಗೋಡು ಧರ್ಮವಲಯದ ಇತರ ಇಗರ್ಜಿಗಳ ಧರ್ಮಗುರುಗಳು, ಡೊಮಿನಿಕನ್ ಯಾಜಕರು ಮತ್ತಿತರರು ಭಾಗವಹಿಸುವರು.