ನವದೆಹಲಿ (PTI): ಕೇಂದ್ರ ಆರೋಗ್ಯ ಸಚಿವಾಲಯದ ಇ-ಆರೋಗ್ಯ ಉಪಕ್ರಮ 'ಇ-ಸಂಜೀವಿನಿ'ಗೆ 2021ರ ಏಪ್ರಿಲ್‌ನಲ್ಲಿ ಚಾಲನೆ ನೀಡಿದಾಗಿನಿಂದ ಈ ವರ್ಷ ಜುಲೈ 26ರ ವರೆಗೆ 14.17 ಕೋಟಿ ಟೆಲಿ- ಸಮಾಲೋಚನೆಗಳು ನಡೆದಿವೆ ಎಂದು ಆರೋಗ್ಯ ಸಚಿವ ಮನ್‌ಸುಖ್ ಮಾಂಡವೀಯ ಅವರು ರಾಜ್ಯಸಭೆಗೆ ಮಂಗಳವಾರ ತಿಳಿಸಿದರು.

ಒಟ್ಟು 14.17 ಕೋಟಿ ಟೆಲಿ- ಸಮಾಲೋಚನೆಗಳಲ್ಲಿ, 57.32 ಲಕ್ಷ ಸಮಾಲೋಚನೆಗಳು ಮಹಾರಾಷ್ಟ್ರದಲ್ಲಿ ನಡೆದಿವೆ. ಅವುಗಳಲ್ಲಿ 9.54 ಲಕ್ಷ ಸಮಾಲೋಚನೆಗಳು ಹಿರಿಯ ನಾಗರಿಕರಿಗಾಗಿ ನಡೆದಿದ್ದರೆ. 31.67 ಲಕ್ಷ ಸಮಾಲೋಚನೆಗಳು ಮಹಿಳೆಯರಿಗಾಗಿ ನಡೆದಿವೆ ಎಂದು ಮಾಂಡವೀಯಾ ತಿಳಿಸಿದ್ದಾರೆ.
'ಟೆಲಿಮೆಡಿಸಿನ್ ಆಯಪ್'ಗೆ 2021ರ ಏಪ್ರಿಲ್ 26ರಂದು ಚಾಲನೆ ನೀಡಲಾಗಿತ್ತು. ಗ್ರಾಮೀಣ ಭಾಗಗಳ ಜನರು ಗ್ರಾಮೀಣ ಪ್ರದೇಶಗಳ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳಿಂದಲೇ ತಜ್ಞ ವೈದ್ಯರ ಜೊತೆ ಆರೋಗ್ಯ ಕುರಿತು ಸಮಾಲೋಚನೆ ನಡೆಸುವ ಅನುಕೂಲವನ್ನು ಈ ಆಯಪ್ ಒದಗಿಸುತ್ತದೆ. 'ವೈದ್ಯರ ಜೊತೆ ವೈದ್ಯರು' ಮತ್ತು 'ವೈದ್ಯರ ಜೊತೆ ರೋಗಿ' ಸಮಾಲೋಚನೆ ನಡೆಸಬಹುದು.