ನವದೆಹಲಿ: ಇತ್ತೀಚೆಗೆ ದೇಶದಲ್ಲಿ ಹೃದಯಾಘಾತ ಹಲವರ ಎದೆಯಲ್ಲಿ ನಡುಕವನ್ನು ಹುಟ್ಟಿಸುವ ರೀತಿಯಲ್ಲಿ ಹೆಚ್ಚಾಗುತ್ತಿದ್ದು, ಸಣ್ಣಪ್ರಾಯದವರೂ ಇದ್ದಕ್ಕಿದ್ದಂತೆ ಕುಸಿದು ಬಿದ್ದು, ಹಠಾತ್ ಹೃದಯಾಘಾತಕ್ಕೆ ಒಳಗಾಗಿ ಸಾಯುತ್ತಿರುವ ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಿವೆ.

ಜಗತ್ತಿನಲ್ಲಿ ಹೃದಯಾಘಾತದಿಂದ ಸಂಭವಿಸುತ್ತಿರುವ ಒಟ್ಟು ಸಾವುಗಳ ಪೈಕಿ ಐದನೇ ಒಂದರಷ್ಟು ಅಂದರೆ 17.9 ಶತಲಕ್ಷ ಸಾವುಗಳು ಭಾರತದಲ್ಲೇ ಆಗುತ್ತಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ-ಅಂಶ ಹೊರಹಾಕಿದೆ. ಇದು ಆತಂಕಕಾರಿ ಸಂಗತಿ ಆಗಿದೆ.
ದೇಶದಲ್ಲಿ ವಯಸ್ಸಿನ ಭೇದವಿಲ್ಲದೆ ಅದರಲ್ಲೂ ಚಿಕ್ಕವಯಸ್ಸಿನವರೂ ಹೃದಯಾಘಾತದಿಂದ ಸಾವಿಗೀಡಾಗುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಇಂಡಿಯನ್ ಹಾರ್ಟ್ ಅಸೋಸಿಯೇಷನ್ (ಐಎಚ್ಎ) ಪ್ರಕಟಿಸಿರುವ ಅಂಕಿ-ಅಂಶದಲ್ಲಿಯೂ ಹೃದಯಾಘಾತಕ್ಕೆ ಸಂಬಂಧಿಸಿದಂತೆ ಆತಂಕಕಾರಿ ಮಾಹಿತಿ ಹೊರಬಿದ್ದಿದೆ.
ಐಎಚ್ಎ ಮಾಹಿತಿ ಪ್ರಕಾರ ದೇಶದಲ್ಲಿ ಹೃದಯಾಘಾತಕ್ಕೆ ಒಳಗಾಗಿ ಸಾಯುತ್ತಿರುವ ಪುರುಷರ ಪೈಕಿ ಶೇ. 50 ಮಂದಿ ಐವತ್ತು ವರ್ಷಗಳಿಗಿಂತ ಒಳಗಿನವರು ಹಾಗೂ ಶೇ. 25 ಮಂದಿ 40 ವರ್ಷಕ್ಕಿಂತ ಒಳಗಿನವರು. ಆದರೆ ಮಹಿಳೆಯರ ಕುರಿತ ಈ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ ಎನ್ನಲಾಗಿದೆ.