ಮುಂಬೈ: ಟೆಲಿಕಾಂ ಆಪರೇಟರ್ ಭಾರ್ತಿ ಏರ್ ಟೆಲ್, ಜೂನ್ 2023ಕ್ಕೆ ಅಂತ್ಯಗೊಂಡ ಮೊದಲ ತ್ರೈಮಾಸಿಕದಲ್ಲಿ 1,612 ಕೋಟಿ ರೂಪಾಯಿಗಳಷ್ಟು ಲಾಭ ಗಳಿಸಿದೆ.
ವರ್ಷದ ಹಿಂದೆ ಇದೇ ಅವಧಿಯಲ್ಲಿದ್ದ ಲಾಭಕ್ಕಿಂತಲೂ ಇದು ಶೇ.14 ರಷ್ಟು ಏರಿಕೆ ಇದಾಗಿದೆ ಎಂದು ಸಂಸ್ಥೆ ತಿಳಿಸಿದೆ. ಗುಣಮಟ್ಟದೆಡೆಗೆ ನಮ್ಮ ಗಮನ, 5.6 ಮಿಲಿಯನ್ ಹೊಸ 4 ಜಿ ಗ್ರಾಹಕರನ್ನು ಹೊಸದಾಗಿ ಗಳಿಸಿದ್ದೇವೆ, ಇದು ಒಂದು ತ್ರೈಮಾಸಿಕದಲ್ಲಿ ಗರಿಷ್ಠ ಪೋಸ್ಟ್ ಪೇಯ್ಡ್ ಗ್ರಾಹಕರ ಸೇರ್ಪಡೆಯಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಗೋಪಾಲ್ ವಿಟ್ಟಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೊಬೈಲ್ ಎಆರ್ ಪಿ ಯು (ಟೆಲಿಕಾಂ ಕಂಪನಿಗಳ ಮೆಟ್ರಿಕ್ಸ್) ಮೊದಲ ತ್ರೈಮಾಸಿಕದಲ್ಲಿ 200 ರೂಪಾಯಿಗಳಿಗೆ ಏರಿಕೆ ಕಂಡಿದೆ.