ತಿರುವನಂತಪುರಂ: ಮೂರು ವರ್ಷಗಳ ನಂತರ ಪೋಲೀಸ್ ಇಲಾಖೆಯು ಕಾನ್ಸ್‍ಟೇಬಲ್‍ಗಳ ಸಾಮೂಹಿಕ ನೇಮಕಾತಿ ನಡೆಸುತ್ತಿದೆ. ಪಿಎಸ್‍ಸಿ ಯಾರ್ಂಕ್ ಪಟ್ಟಿಯಲ್ಲಿ ಹೆಸರು ಬಂದಿರುವ 2,681 ಪ್ರಶಿಕ್ಷಣಾರ್ಥಿಗಳಿಗೆ ಆಗಸ್ಟ್ 16 ರಂದು ತಮ್ಮ ತರಬೇತಿ ಕೇಂದ್ರಗಳಲ್ಲಿ ವರದಿ ಮಾಡಲು ತಿಳಿಸಲಾಗಿದೆ.
ಒಂಬತ್ತು ತಿಂಗಳ ಅವಧಿಯ ತರಬೇತಿಯು ಸಶಸ್ತ್ರ ಬೆಟಾಲಿಯನ್‍ನ ಎಂಟು ಕೇಂದ್ರಗಳಲ್ಲಿ ಆಗಸ್ಟ್ 17 ರಂದು ಪ್ರಾರಂಭವಾಗುತ್ತದೆ. ಇಲಾಖೆಯಲ್ಲಿ ಅಸ್ತಿತ್ವದಲ್ಲಿರುವ ಎಲ್ಲಾ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ದೊಡ್ಡ ಪ್ರಮಾಣದ ನೇಮಕಾತಿಯನ್ನು ಮಾಡಲಾಗುತ್ತಿದೆ ಎಂದು ಪೋಲೀಸ್ ಮೂಲಗಳು ತಿಳಿಸಿವೆ.
ಇಲಾಖೆಯು 50,000 ಕ್ಕೂ ಹೆಚ್ಚು ಸಿಬ್ಬಂದಿಯನ್ನು ಹೊಂದಿದ್ದು, ಹೊಸ ಅಭ್ಯರ್ಥಿಗಳ ಸೇರ್ಪಡೆಯಿಂದ ಈಗಾಗಲೇ ವಿಸ್ತರಿಸಿರುವ ಇಲಾಖೆಯ ಕೆಲಸದ ಹೊರೆ ಕಡಿಮೆಯಾಗುವ ನಿರೀಕ್ಷೆಯಿದೆ. ನೇಮಕಗೊಂಡವರಲ್ಲಿ 305 ಮಹಿಳೆಯರು ತ್ರಿಶೂರ್‍ನಲ್ಲಿರುವ ಕೇರಳ ಪೆÇಲೀಸ್ ಅಕಾಡೆಮಿಯಲ್ಲಿ (ಕೆಇಪಿಎ) ತರಬೇತಿ ಪಡೆದು ಮಹಿಳಾ ಬೆಟಾಲಿಯನ್‍ನ ಭಾಗವಾಗಲಿದ್ದಾರೆ.
484 ಪುರುಷರು ಮಲಪ್ಪುರಂನ ಎಂಎಸ್‍ಪಿ ಬೆಟಾಲಿಯನ್‍ನಲ್ಲಿ, 324 ಪುರುಷರು ತಿರುವನಂತಪುರಂನ ಎಸ್‍ಎಪಿ ಕ್ಯಾಂಪ್‍ನಲ್ಲಿ ಮತ್ತು ಉಳಿದವರು ಸಶಸ್ತ್ರ ಪೋಲೀಸರ ಐದು ಬೆಟಾಲಿಯನ್‍ಗಳಲ್ಲಿ ತರಬೇತಿ ಪಡೆಯಲಿದ್ದಾರೆ.
ಸಶಸ್ತ್ರ ಬೆಟಾಲಿಯನ್ ಎಡಿಜಿಪಿ ಮತ್ತು ಕೆಇಪಿಎ ಎಡಿಜಿಪಿ ಅವರಿಗೆ ಕ್ರಮವಾಗಿ ಹೊರಾಂಗಣ ಮತ್ತು ಒಳಾಂಗಣ ತರಬೇತಿ ಅವಧಿಗಳನ್ನು ಸಂಯೋಜಿಸುವ ಕಾರ್ಯವನ್ನು ವಹಿಸಲಾಗಿದೆ. ತರಬೇತಿಯ ಪ್ರಗತಿಯ ಕುರಿತು ರಾಜ್ಯ ಪೋಲೀಸ್ ಮುಖ್ಯಸ್ಥರು ಇಬ್ಬರಿಂದ ಮಾಸಿಕ ವರದಿ ಕೇಳಿದ್ದಾರೆ.
ತರಬೇತಿ ಪೂರ್ಣಗೊಂಡ ನಂತರ, ಪ್ರಶಿಕ್ಷಣಾರ್ಥಿಗಳನ್ನು ವಿವಿಧ ಬೆಟಾಲಿಯನ್‍ಗಳಿಗೆ ನಿಯೋಜಿಸಲಾಗುವುದು. ಬೆಟಾಲಿಯನ್‍ಗಳಿಂದ ಅವರನ್ನು ಸ್ಥಳೀಯ ಪೋಲೀಸ್ ಠಾಣೆಗಳಿಗೆ ಸಿವಿಲ್ ಪೋಲೀಸ್ ಅಧಿಕಾರಿಗಳನ್ನಾಗಿ ನಿಯೋಜಿಸಲಾಗುವುದು. ಸ್ಥಳೀಯ ಠಾಣೆಗಳಲ್ಲಿ ಕೆಲಸ ಮಾಡಲು ಇಚ್ಛಿಸುವವರು ತಮ್ಮ ಖಾಲಿ ಹುದ್ದೆಯನ್ನು ವರದಿ ಮಾಡುವವರೆಗೆ ಆರಂಭದಲ್ಲಿ ಬೆಟಾಲಿಯನ್‍ಗಳಲ್ಲಿ ಕೆಲಸ ಮಾಡಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.