ಕಾಸರಗೋಡು: ಬೆಂಗಳೂರಿನ ಕರ್ನಾಟಕ ಗಮಕ ಕಲಾ ಪರಿಷತ್‍ನ ಕೇರಳ ಗಡಿನಾಡ ಘಟಕ ಕಾಸರಗೋಡು ಮತ್ತು ಸಿರಿಗನ್ನಡ ವೇದಿಕೆ ಬೆಂಗಳೂರಿನ ಕೇರಳ ಗಡಿನಾಡ ಘಟಕ ವತಿಯಿಂದ 'ಗಮಕ ಶ್ರಾವಣ'ಕಾರ್ಯಕ್ರಮ ಆ. 18ರಂದು ಎಡನೀರು ಮಠದಲ್ಲಿ ಆರಂಭಗೊಳ್ಳುವುದು. ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ಚಾತುರ್ಮಾಸ್ಯ ಸಮಾರಂಭದ ಅಂಗವಾಗಿ ಆ. 18ರಂದು ಮಧ್ಯಾಹ್ನ 3ಕ್ಕೆ ಕಾರ್ಯಕ್ರಮ ನಡೆಯುವುದು.
ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡುವರು. ಟಿ. ಶಂಕರನಾರಾಯಣ ಭಟ್ ಅಧ್ಯಕ್ಷತೆ ವಹಿಸುವರು. ರಾಜೇಂದ್ರ ಕಲ್ಲೂರಾಯ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ವಿ.ಬಿ ಕುಳಮರ್ವ ಪ್ರಾಸ್ತಾವಿಕ ಮಾತುಗಳನ್ನಾಡುವರು. ಈ ಸಂದರ್ಭ ದಿವ್ಯಾ ಕಾರಂತ ಅವರಿಂದ ವಾಚನ ಮತ್ತು ಜಯಲಕ್ಷ್ಮೀ ಕಾರಂತ ಮಂಗಲ್ಪಾಡಿ ಅವರಿಂದ ಪ್ರವಚನ ನಡೆಯುವುದು.
ಆ. 22ರಂದು ಮಧ್ಯಾಹ್ನ 3ಕ್ಕೆ ಕನ್ನೆಪ್ಪಾಡಿ ಆಶ್ರಯ ಆಶ್ರಮ ಜನಸೇವಾ ವಿಶ್ವಸ್ಥ ನಿಧಿ ವತಿಯಿಂದ ಕಾರ್ಯಕ್ರಮ ನಡೆಯುವುದು. ಸೆ. 3ರಂದು ಮಧ್ಯಾಹ್ನ 3ಕ್ಕೆ ವರ್ಕಾಡಿ ನೀರೊಳಿಕೆ ಶ್ರೀಮಾತಾ ಬಾಲಿಕಾಶ್ರಮ ಹಾಗೂ ಸೆ. 17ರಂದು ದೈಗೋಳಿ ಸಾಯಿನಿಕೇತನ ಸೇವಾಶ್ರಮದಲ್ಲಿ ಸಮಾರೋಪ ಸಮಾರಂಭ ನಡೆಯುವುದು.