ಕಾಸರಗೋಡು: ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಸೆ.18 ಮತ್ತು 19ರಂದು ಉದುಮ ಲಲಿತ್ ರೆಸಾರ್ಟ್‍ನಲ್ಲಿ ಆಯೋಜಿಸಿರುವ ‘ರೈಸಿಂಗ್ ಕಾಸರಗೋಡ್’ ಹೂಡಿಕೆದಾರರ ಶೃಂಗಸಭೆಯನ್ನು ಕೈಗಾರಿಕಾ ಸಚಿವ ಪಿ.ರಾಜೀವ್ ಉದ್ಘಾಟಿಸಲಿದ್ದಾರೆ. ಸೆ.19ರಂದು ನಡೆಯಲಿರುವ ಸಭೆಯಲ್ಲಿ ಹಣಕಾಸು ಸಚಿವ ಕೆ.ಎಲ್.ಬಾಲಗೋಪಾಲ್ ಪಾಲ್ಗೊಳ್ಳಲಿದ್ದಾರೆ. ಮುಖ್ಯ ಕಾರ್ಯದರ್ಶಿ ವಿ. ವೇಣು, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಪಿ.ಎ.ಎಂ.ಮಹಮ್ಮದ್ ಹನೀಷ್, ಕೈಗಾರಿಕಾ ಇಲಾಖೆ ನಿರ್ದೇಶಕ ಎಸ್.ಹರಿಕಿಶೋರ್, ಕುಟುಂಬಶ್ರೀ ಕಾರ್ಯನಿರ್ವಾಹಕ ನಿರ್ದೇಶಕ ಜಾಫರ್ ಮಲಿಕ್, ಸಂಸದರು, ಶಾಸಕರು, ತ್ರಿಸ್ಥರ ಪಂಚಾಯಿತಿ ಜನಪ್ರತಿನಿಧಿಗಳು ಮತ್ತಿತರರು ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಹೂಡಿಕೆದಾರರ ಶೃಂಗಸಭೆಯ ಪ್ರಚಾರ ಸಮಿತಿ ಸಭೆ ನಡೆಯಿತು. ಸಭೆಯಲ್ಲಿ ಆಯ್ಕೆಯಾದ ಹೊಸ ಯೋಜನೆಗಳಿಗೆ ಹೂಡಿಕೆದಾರರನ್ನು ಆಹ್ವಾನಿಸಲು ನಿರ್ಧರಿಸಲಾಯಿತು. ಓಣಂ ಸಂದರ್ಭದಲ್ಲಿ ಸಾರ್ವಜನಿಕರಿಗಾಗಿ ಡಿಜಿಟಲ್ ಹೂವಿನ ಸ್ಪರ್ಧೆಯನ್ನು ಆಯೋಜಿಸಲಾಗುವುದು. ಯೂಟ್ಯೂಬರ್ಸ್ ಗಳ ಸಭೆಯೂ ಈ ಸಂದರ್ಭ ನಡೆಯಲಿದೆ. ಪ್ರಚಾರ ಕಾರ್ಯಕ್ರಮಗಳನ್ನು ಇನ್ನಷ್ಟು ಚುರುಕುಗೊಳಿಸಲು ಸಭೆ ನಿರ್ಧರಿಸಿತು.
ಜಿಲ್ಲಾ ಪಂಚಾಯತ್ ಅಧ್ಯಕ್ಷರ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ವಹಿಸಿದ್ದರು. ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಜೆ.ಸಜಿತ್, ಜಿಲ್ಲಾ ಕೈಗಾರಿಕಾ ಕೇಂದ್ರದ ಪ್ರಧಾನ ವ್ಯವಸ್ಥಾಪಕ ಕೆ.ಸಜಿತ್ ಕುಮಾರ್, ಜಿಲ್ಲಾ ವಾರ್ತಾ ಅಧಿಕಾರಿ ಹಾಗೂ ಪ್ರಚಾರ ಸಮಿತಿ ಸಂಚಾಲಕ ಎಂ.ಮಧುಸೂದನನ್, ಜಿಲ್ಲಾ ಪಂಚಾಯಿತಿ ಸದಸ್ಯೆ ಎಂ.ಎಸ್.ಶೈಲಜಾ ಭಟ್, ಜಿಲ್ಲಾ ಕೈಗಾರಿಕಾ ಕೇಂದ್ರದ ಆಡಳಿತ ಸಹಾಯಕ ಆದಿಲ್ ಮಹಮ್ಮದ್, ಜಿಲ್ಲಾ ಪಂಚಾಯಿತಿ ಕಿರಿಯ ಅಧೀಕ್ಷಕಿ ಕೆ.ರಂಜಿನಿ, ಎಐಒ ಎ.ಪಿ.ದಿಲ್ನಾ, ಯೋಜನಾ ಸಹಾಯಕ ಬಿ.ಕೆ.ಪ್ರಜೀಶ್, ಕೆಡಿಪಿ ಅನುವಾದಕ ಕೆ.ಎಂ.ರಂಜಿತ್, ಒ.ಎ.ಇಬ್ರಾಹಿಂ ಸಾಬೀರ್, ಸಿ.ಎ.ಎಂ.ಸೌಮ್ಯ, ಡಿಸೈನರ್ ಸುರೇಶ್ ಬೇಕಲ್, ಪಿಆರ್‍ಡಿ ನೌಕರರಾದ ಆರ್.ಮನೋಜ್, ಕೆ.ದೀಕ್ಷಿತ ಭಾಗವಹಿಸಿದ್ದರು.