ಕಾಸರಗೋಡು: ಕೆ.ಎಸ್.ಆರ್.ಟಿ.ಸಿಯ 'ಬಜೆಟ್ ಟೂರಿಸಂ'ಗೆ ಸಂಬಂಧಿಸಿದಂತೆ ಕಾಸರಗೋಡು ಘಟಕದಿಂದ ಆಗಸ್ಟ್ 19 ರಂದು ಕಾಸರಗೋಡಿನಿಂದ ಮುನ್ನಾರಿಗೆ ಪ್ರವಾಸ ಆಯೋಜಿಸಲಾಗಿದೆ. ಇಡುಕ್ಕಿಯ ಕುಂಡಲ ಡ್ಯಾಮ್, ಇಕ್ಕೋ ಪಾಯಿಂಟ್, ಮಾಟ್ಟುಪೆಟ್ಟಿ ಡ್ಯಾಮ್, ಬೋಟನಿಕಲ್ ಗಾರ್ಡನ್, ಫ್ಲವರ್ ಗಾರ್ಡನ್, ಇರವಿಕುಲಂ ನ್ಯಾಷನಲ್ ಪಾರ್ಕ್, ಕಲ್ಲಾರ್ ಕುಟ್ಟಿ ಡ್ಯಾಮ್, ಪೂಪ್ಪಾರ, ಚತುರಂಗಪ್ಪಾರ, ಗ್ಯಾಪ್ ರೋಡ್ ಮುಂತಾದ ಪ್ರಕೃತಿರಮಣೀಯ ಹಾಗೂ ಪ್ರಮುಖ ತಾಣಗಳಿಗೆ ಪ್ರವಾಸ ಆಯೋಜಿಸಲಾಗಿದೆ. ರೂಟ್,ಚಾರ್ಜ್, ಬುಕ್ಕಿಂಗ್ ಮತ್ತು ಇತರ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9446862282, 8075556767 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.