ನವದೆಹಲಿ: ಆರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡು 10,000 ರೂಪಾಯಿಗಳಿಂದ 1 ಕೋಟಿ ರೂಪಾಯಿಯವರೆಗೆ ನಗದು ಬಹುಮಾನವನ್ನು ನೀಡುವ 'ಮೇರಾ ಬಿಲ್ ಮೇರಾ ಅಧಿಕಾರ್' ಇನ್‌ವಾಯ್ಸ್ ಪ್ರೋತ್ಸಾಹಕ ಯೋಜನೆಯನ್ನು ಸರ್ಕಾರವು ಸೆಪ್ಟೆಂಬರ್ 1 ರಿಂದ ಪ್ರಾರಂಭಿಸಲಿದೆ.
ಗ್ರಾಹಕರು ವಸ್ತುಗಳನ್ನು ಮಾರುಕಟ್ಟೆಯಲ್ಲಿ ಖರೀದಿಸುವಾಗ ಪ್ರತಿ ಬಾರಿ ಕಡ್ಡಾಯವಾಗಿ ರಸೀದಿ ಕೇಳುವಂತೆ ಮಾಡುವ ಗುರಿಯನ್ನು ಹೊಂದಿರುವ ಈ ಯೋಜನೆಯನ್ನು ಅಸ್ಸಾಂ, ಗುಜರಾತ್ ಮತ್ತು ಹರಿಯಾಣ ರಾಜ್ಯಗಳಲ್ಲಿ ಪ್ರಾರಂಭಿಸಲಾಗುವುದು; ಪುದುಚೇರಿ, ದಮನ್ ಮತ್ತು ದಿಯು ಮತ್ತು ದಾದ್ರಾ ಮತ್ತು ನಗರ ಹವೇಲಿಯ ಕೇಂದ್ರೀಯ ಆಡಳಿತ ಪ್ರದೇಶಗಳಲ್ಲಿ ಸಹ ಜಾರಿಗೆ ತರಲಾಗುತ್ತಿದೆ ಎಂದು ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ (CBIC) ತಿಳಿಸಿದೆ.
ಜಿಎಸ್‌ಟಿ ಇನ್‌ವಾಯ್ಸ್‌ಗಳ ಅಪ್‌ಲೋಡ್‌ನಲ್ಲಿ ನಗದು ಬಹುಮಾನಗಳನ್ನು ಗಳಿಸಲು ಇನ್‌ವಾಯ್ಸ್ ಇನ್ಸೆಂಟಿವ್ ಸ್ಕೀಮ್ ನ್ನು ಜಾರಿಗೆ ತರಲಾಗುತ್ತಿದೆ ಎಂದು ಸಿಬಿಐಸಿ ಟ್ವೀಟ್ ಮಾಡಿದೆ.
ಗ್ರಾಹಕರಿಗೆ ಸರಕು ಮತ್ತು ಸೇವಾ ತೆರಿಗೆ (GST) ನೋಂದಾಯಿತ ಪೂರೈಕೆದಾರರು ನೀಡಿದ ಎಲ್ಲಾ ಇನ್‌ವಾಯ್ಸ್‌ಗಳು 'ಮೇರಾ ಬಿಲ್ ಮೇರಾ ಅಧಿಕಾರ್' ಯೋಜನೆಗೆ ಅರ್ಹವಾಗಿರುತ್ತವೆ, ಇದರ ಅಡಿಯಲ್ಲಿ ಮಾಸಿಕ ಮತ್ತು ತ್ರೈಮಾಸಿಕ ಡ್ರಾಗಳನ್ನು ಮಾಡಲಾಗುತ್ತದೆ. ವಿಜೇತರು ನಗದು ಬಹುಮಾನಗಳಿಗೆ ಅರ್ಹರಾಗುತ್ತಾರೆ.
ಅದೃಷ್ಟದ ಡ್ರಾಗಾಗಿ ಪರಿಗಣಿಸಬೇಕಾದ ಇನ್‌ವಾಯ್ಸ್‌ನ ಕನಿಷ್ಠ ಖರೀದಿ ಮೌಲ್ಯವು 200 ರೂಪಾಯಿ ಆಗಿದೆ. ವ್ಯಕ್ತಿಗಳು ಸೆಪ್ಟೆಂಬರ್ 1 ರಿಂದ ಪ್ರಾರಂಭವಾಗುವ ತಿಂಗಳಲ್ಲಿ ಗರಿಷ್ಠ 25 ಇನ್‌ವಾಯ್ಸ್‌ಗಳನ್ನು ಅಪ್‌ಲೋಡ್ ಮಾಡಬಹುದು.
'ಮೇರಾ ಬಿಲ್ ಮೇರಾ ಅಧಿಕಾರ್' ಮೊಬೈಲ್ ಅಪ್ಲಿಕೇಶನ್ ಐಒಎಸ್ ಮತ್ತು ಆಂಡ್ರಾಯ್ಡ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಾಗಲಿದೆ. ಅಪ್ಲಿಕೇಶನ್‌ನಲ್ಲಿ ಅಪ್‌ಲೋಡ್ ಮಾಡಿದ ಇನ್‌ವಾಯ್ಸ್ ಮಾರಾಟಗಾರರ GSTIN, ಇನ್‌ವಾಯ್ಸ್ ಸಂಖ್ಯೆ, ಪಾವತಿಸಿದ ಮೊತ್ತ ಮತ್ತು ತೆರಿಗೆ ಮೊತ್ತವನ್ನು ಹೊಂದಿರಬೇಕು.
ವ್ಯಾಪಾರದಿಂದ ಗ್ರಾಹಕನಿಗೆ (B2C) ಸರಕುಗಳು ಅಥವಾ ಸೇವೆಗಳ ಖರೀದಿಗಳನ್ನು ಮಾಡುವಾಗ ಮಾರಾಟಗಾರರಿಂದ ನಿಜವಾದ ಇನ್‌ವಾಯ್ಸ್‌ಗಳನ್ನು ಕೇಳಲು ನಾಗರಿಕರು ಮತ್ತು ಗ್ರಾಹಕರನ್ನು ಉತ್ತೇಜಿಸುವ ರೀತಿಯಲ್ಲಿ ಈ ಯೋಜನೆಯನ್ನು ಪರಿಕಲ್ಪನೆ ಮಾಡಲಾಗಿದೆ.