HEALTH TIPS

2000 ರೂಪಾಯಿ ನೋಟು ಹಿಂತೆಗೆತ: ಚಲಾವಣೆಯಲ್ಲಿದ್ದ ಕರೆನ್ಸಿ ಮೊತ್ತ 1.54 ಲಕ್ಷ ಕೋಟಿ ರೂ. ನಷ್ಟು ಇಳಿಕೆ!

              ನವದೆಹಲಿ: 2000 ರೂಪಾಯಿ ನೋಟನ್ನು ಆರ್ ಬಿಐ ಹಿಂಪಡೆಯುತ್ತಿರುವುದರ ಪರಿಣಾಮ ಚಲಾವಣೆಯಲ್ಲಿದ್ದ ಕರೆನ್ಸಿಗಳು 1.54 ಲಕ್ಷ ಕೋಟಿ ರೂಪಾಯಿಯಷ್ಟು ಕುಸಿತ ಕಂಡಿದೆ. 

                     ಇದು ಜುಲೈ. 28 ವರೆಗಿನ ಅಂಕಿ-ಅಂಶವಾಗಿದೆ. ಈ ಕುಸಿತಕ್ಕೆ 2000 ರೂಪಾಯಿ ಮುಖಬೆಲೆಯ ನೋಟುಗಳ ಹಿಂತೆಗೆತವೇ ಸಂಪೂರ್ಣ ಕಾರಣವಲ್ಲ ಎಂದೂ ವಿಶ್ಲೇಷಿಸಲಾಗುತ್ತಿದೆ. ಇದೇ ರೀತಿಯ ಮಧ್ಯ ವಾರ್ಷಿಕ ಕುಸಿತದ ಟ್ರೆಂಡ್ ಈ ಹಿಂದಿನ ವರ್ಷಗಳಲ್ಲೂ ಕಂಡುಬಂದಿತ್ತು.
     
                         ಆದರೆ ಕಳೆದ ವರ್ಷಗಳಿಗೆ ಹೋಲಿಕೆ ಮಾಡಿದರೆ, ಈ ವರ್ಷ ಕುಸಿತದ ಪ್ರಮಾಣ ತುಸು ಹೆಚ್ಚಾಗಿಯೇ ಇದ್ದು, ಈ ಹೆಚ್ಚಾಗಿರುವುದರ ಪರಿಣಾಮದ ಹಿಂದಿನ ಕಾರಣ 2000 ರೂಪಾಯಿ ಮುಖಬೆಲೆಯ ನೋಟುಗಳ ಹಿಂತೆಗೆತ ಎಂದು ಹೇಳಲಾಗುತ್ತಿದೆ.

                      2022 ರಲ್ಲಿ ಮೇ.20 ಹಾಗೂ ಜು.29 ಅವಧಿಯಲ್ಲಿ ಒಟ್ಟು ಕರೆನ್ಸಿಯಲ್ಲಿನ ಚಲಾವಣೆ 41,000 ಕೋಟಿ ರೂಪಾಯಿಗಳಷ್ಟು ಕುಸಿತ ಕಂಡಿತ್ತು. 2021 ರಲ್ಲಿ ಮೇ.21- ಜು.30 ಅವಧಿಯಲ್ಲಿ 17,000 ಕೋಟಿ ರೂಪಾಯಿಗಳಷ್ಟು ಕುಸಿತ ಕಂಡಿತ್ತು. ಆದರೆ ಈ ವರ್ಷ ಒಟ್ಟು ಚಲಾವಣೆಯಲ್ಲಿರುವ ಕರೆನ್ಸಿಯ ಪೈಕಿ ಶೇ.4.4 ರಷ್ಟು ಕುಸಿತ ದಾಖಲಾಗಿದೆ. 

                          ನಿಖರ ಅಂಕಿ-ಅಂಶಗಳ ಪ್ರಕಾರ, ಮೇ.19 ರ ವರೆಗೆ 34.78 ಲಕ್ಷ ಕೋಟಿ ರೂಪಾಯಿಯಷ್ಟಿದ್ದ ಕರೆನ್ಸಿ ಚಲಾವಣೆ ಜು.28 ವೇಳೆಗೆ 2000 ರೂಪಾಯಿ ಮುಖಬೆಲೆಯ ನೋಟುಗಳ ಹಿಂತೆಗೆತ ಘೋಷಣೆಯ ಬಳಿಕ 33.24 ಲಕ್ಷ ಕೋಟಿಗಳಿಗೆ ಇಳಿಕೆಯಾಯಿತು ಎಂದು ತಿಳಿದುಬಂದಿದೆ. 


    ಕಾಮೆಂಟ್‌‌ ಪೋಸ್ಟ್‌ ಮಾಡಿ

    0 ಕಾಮೆಂಟ್‌ಗಳು
    * Please Don't Spam Here. All the Comments are Reviewed by Admin.

    Top Post Ad

    Click to join Samarasasudhi Official Whatsapp Group

    Qries

    Qries

    Below Post Ad


    ಜಾಹಿರಾತು














    Qries