ಮಧೂರು: ಅಂತರಾಷ್ಟ್ರೀಯ ಧಾನ್ಯ(ಮಿಲ್ಲೆಟ್) 2023 ರ ಅಭಿಯಾನದ ಅಂಗವಾಗಿ, ಮಧೂರು ಕೃಷಿ ಭವನವು ಮಧೂರು ಗ್ರಾಮ ಪಂಚಾಯಿತಿಯ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಸೈಕಲ್ ರ್ಯಾಲಿಯನ್ನು ಆಯೋಜಿಸಿತ್ತು. ಕಾಸರಗೋಡು ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಸೈಕಲ್ ರ್ಯಾಲಿ ಉದ್ಘಾಟಿಸಿದರು. ಮಧೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋಪಾಲಕೃಷ್ಣ ಕೆ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕೃಷಿ ಅಧಿಕಾರಿ ಮಿನಿ ಪಿ ಜಾನ್ ಆಹಾರದಲ್ಲಿ ಧಾನ್ಯಗಳ ಮಹತ್ವ ಕುರಿತು ಸಂದೇಶ ನೀಡಿದರು.
ಗ್ರಾಮ ಪಂಚಾಯತಿ ಸದಸ್ಯರು ಮತ್ತು ಎಡಿಸಿ ಸದಸ್ಯರು ಭಾಗವಹಿಸಿದ್ದರು. ಮಧೂರು, ಜಿಎಚ್‍ಎಸ್‍ಎಸ್ ಪಟ್ಲ ಮತ್ತು ಎಂ.ಪಿ ಇಂಟರ್‍ನ್ಯಾಶನಲ್ ಶಾಲೆಯ ವಿದ್ಯಾರ್ಥಿಗಳು ಸೈಕಲ್ ರ್ಯಾಲಿಯಲ್ಲಿ ಭಾಗವಹಿಸಿದ್ದರು.