ಕಾಸರಗೋಡು: ಇತರರಿಂದ ಹಣ ಪಡೆದು ಪತ್ನಿಯನ್ನು ಬಳಸಿ ವೀಡಿಯೋ ಕಾಲ್ ಮಾಡಿ ವಿವಸ್ತ್ರೆಯಾಗಿ ಕಾಣಿಸಿಕೊಳ್ಳಲು ಬಯಸಿದ ಪತಿ ವಿರುದ್ಧ 20ರ ಹರೆಯದ ಯುವತಿ ದೂರು ದಾಖಲಿಸಿದ್ದಾಳೆ.
ಬಲವಂತವಾಗಿ ವಿವಸ್ತ್ರಳಾಗಲು ಹೇಳಿ ವಿಡಿಯೋ ಕಾಲ್ ಮಾಡಿದ್ದು, ನಿರಾಕರಿಸಿದಾಗ ಥಳಿಸಿದ್ದಾರೆ ಎಂಬುದು ದೂರು. ಘಟನೆ ಸಂಬಂಧ ನೀಲೇಶ್ವರ ಪೋಲೀಸರಿಗೆ ಪತ್ನಿ ದೂರು ನೀಡಿದ್ದಾಳೆ. ಪಾಲಾದಲ್ಲಿ ಬಾಡಿಗೆಗೆ ವಾಸವಾಗಿರುವ ಬಂಗಳಂ ನಿವಾಸಿ ವಿರುದ್ಧ ದೂರು ದಾಖಲಾಗಿದೆ.
ಯುವಕ ಜನರಿಂದ ಹಣ ಪಡೆದು ಯುವತಿಯನ್ನು ಬೆದರಿಸಿ ಬೆತ್ತಲೆ ದೇಹದಲ್ಲಿ ವಿಡಿಯೋ ಕಾಲ್ ಮಾಡುವಂತೆ ಹೇಳಿದ್ದಾನೆ. ಇದಕ್ಕೆ ಸಿದ್ಧಳಾಗದ ಕಾರಣ ಅಮಾನುಷವಾಗಿ ಥಳಿಸಿ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.ಯುವಕನ ವಿರುದ್ಧ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ.