HEALTH TIPS

ಜಿ-20 ಶೃಂಗಸಭೆ ಇತಿಹಾಸದಲ್ಲಿಯೇ ದೊಡ್ಡ ಸಭೆಯಾಗಲಿದೆ: ಪ್ರಧಾನಿ ಮೋದಿ

               ವದೆಹಲಿ: ಜಿ-20 ಗುಂಪಿನ ಅಧ್ಯಕ್ಷ ಸ್ಥಾನವನ್ನು ಭಾರತ ವಹಿಸಿಕೊಂಡಿದೆ ಎಂದರೆ ದೇಶದ ಜನತೆಯೇ ಅಧ್ಯಕ್ಷತೆ ವಹಿಸಿಕೊಂಡಿದ್ದಾರೆ ಎಂದರ್ಥ ಎಂದು ಪ್ರಧಾನಿ ನರೇಂದ್ರ ಮೋದಿ 'ಮನ್‌ ಕಿ ಬಾತ್‌'ನಲ್ಲಿ ಹೇಳಿದ್ದಾರೆ.

               ಜಿ-20 ಶೃಂಗಸಭೆಯು ಸೆಪ್ಟೆಂಬರ್‌ 9 ಹಾಗೂ 10ರಂದು ದೆಹಲಿಯಲ್ಲಿ ನಡೆಯಲಿದೆ.

ಈ ಸಭೆಗಾಗಿ ಭಾರತ ಸನ್ನದ್ಧವಾಗಿದ್ದು 40 ದೇಶಗಳ ನಾಯಕರು ಹಾಗೂ ಜಾಗತಿಕ ಸಂಘಟನೆಗಳ ಮುಖ್ಯಸ್ಥರು ಶೃಂಗದಲ್ಲಿ ಪಾಲ್ಗೊಳ್ಳಲಿದ್ದಾರೆ.

                  ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ 'ಮನ್‌ ಕಿ ಬಾತ್‌'ನಲ್ಲಿ ಮಾತನಾಡಿದರು.

ಜಿ-20 ಅಧ್ಯಕ್ಷ ಸ್ಥಾನ ವಹಿಸಿಕೊಂಡ ನಂತರ ಈ ಗುಂಪನ್ನು ಹೆಚ್ಚು ಒಳಗೊಳ್ಳುವಿಕೆ ಇರುವ ವೇದಿಕೆಯನ್ನಾಗಿ ಮಾಡಿದ ಹೆಗ್ಗಳಿಕೆಯೂ ಭಾರತದ್ದಾಗಿದೆ. ಇದು ಈ ಸಂಘಟನೆಯ ಇತಿಹಾಸದಲ್ಲಿಯೇ ದೊಡ್ಡ ಸಭೆಯಾಗಲಿದೆ ಎಂದು ಅವರು ಹೇಳಿದರು.

               ಭಾರತದ ಆಹ್ವಾನದ ಮೇರೆಗೆ ಆಫ್ರಿಕಾ ಒಕ್ಕೂಟ ಸಹ ಜಿ-20 ಸೇರುತ್ತಿದೆ. ಆಫ್ರಿಕಾ ಜನರ ಕೂಗು ವಿಶ್ವದ ಈ ಮಹತ್ವದ ವೇದಿಕೆಯನ್ನು ತಲುಪಿದಂತಾಗಿದೆ ಎಂದು ಮೋದಿ ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries