ಗಾಂಧಿನಗರ: ಸಾರ್ವಜನಿಕರ ಆರೋಗ್ಯ ರಕ್ಷಣೆಗಾಗಿ ನವೀನ ಆವಿಷ್ಕಾರಗಳು ಹಾಗೂ ತಂತ್ರಜ್ಞಾನದ ಸಮಾನ ಲಭ್ಯತೆಗೆ ಪೂರಕವಾಗಿ ಕಾರ್ಯನಿರ್ವಹಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಜಿ 20 ಶೃಂಗದ ಸದಸ್ಯ ರಾಷ್ಟ್ರಗಳಿಗೆ ಕರೆ ನೀಡಿದರು.
ಗಾಂಧಿನಗರ: ಸಾರ್ವಜನಿಕರ ಆರೋಗ್ಯ ರಕ್ಷಣೆಗಾಗಿ ನವೀನ ಆವಿಷ್ಕಾರಗಳು ಹಾಗೂ ತಂತ್ರಜ್ಞಾನದ ಸಮಾನ ಲಭ್ಯತೆಗೆ ಪೂರಕವಾಗಿ ಕಾರ್ಯನಿರ್ವಹಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಜಿ 20 ಶೃಂಗದ ಸದಸ್ಯ ರಾಷ್ಟ್ರಗಳಿಗೆ ಕರೆ ನೀಡಿದರು.
ಇಲ್ಲಿ ನಡೆದ ಜಿ 20 ಸದಸ್ಯ ರಾಷ್ಟ್ರಗಳ ಆರೋಗ್ಯ ಸಚಿವರ ಸಭೆ ಉದ್ದೇಶಿಸಿ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು, ಮುಂದಿನ ಆರೊಗ್ಯ ತುರ್ತು ಅನ್ನು ಪರಿಣಾಮಕಾರಿಯಾಗಿ ಎದುರಿಸಲು ಸರ್ವರೂ ಸಜ್ಜಾಗಿರಬೇಕು ಎಂದು ಅಭಿಪ್ರಾಯಪಟ್ಟರು.
ಡಿಜಿಟಲ್ ಪರಿಹಾರ ಕ್ರಮಗಳು, ನವೀನ ಅನ್ವೇಷಣೆಗಳು ನಮ್ಮ ಪ್ರಯತ್ನಗಳು ಸಮಾನವಾಗಿ ತಲುಪಲು, ಸೇರ್ಪಡೆಯುಕ್ತ ಕ್ರಮದಲ್ಲಿ ಜಾರಿಗೊಳಿಸಲು ಅನುಕೂಲಕರ. ತಂತ್ರಜ್ಞಾನದ ನೆರವು ಎಲ್ಲರಿಗೂ ತಲುಪುವಂತಹ ವ್ಯವಸ್ಥೆ ರೂಪಿಸೋಣ. ಇದು, ಜಾಗತಿಕ ಆರೋಗ್ಯ ರಕ್ಷಣೆ ಗುರಿಯತ್ತ ನಮ್ಮನ್ನು ಕರೆದೊಯ್ಯುತ್ತದೆ ಎಂದರು.
ಕ್ಷಯವನ್ನು ಜಾಗತಿಕ ಗಡುವಿಗೆ ಮೊದಲೇ ಭಾರತ ನಿರ್ಮೂಲನೆ ಮಾಡಲಿದೆ ಎಂದು ಸಭೆಗೆ ಮಾಹಿತಿ ನೀಡಿದ ಪ್ರಧಾನಿ, ಕ್ಷಯ ನಿರ್ಮೂಲನೆ ವಿಷಯದಲ್ಲಿ ಕೈಜೋಡಿಸುವಂತೆ ನಾಗರಿಕರಿಗೂ ಕೋರಲಾಗಿದೆ. ಈ ಕರೆಗೆ ಸ್ಪಂದಿಸಿ ನಾಗರಿಕರು ಈವರೆಗೆ 10 ಲಕ್ಷ ಕ್ಷಯರೋಗಿಗಳ ಆರೋಗ್ಯ ರಕ್ಷಣೆ ಹೊಣೆ ಹೊತ್ತಿದ್ದಾರೆ ಎಂದರು.
ಕ್ಷಯ ನಿರ್ಮೂಲನೆಗೆ 2030 ಜಾಗತಿಕ ಗಡುವಾಗಿದೆ. ಅದಕ್ಕೇ ಮೊದಲೇ ಭಾರತ ಗುರಿ ಸಾಧಿಸಲಿದೆ. ನಾವು ಖಂಡಿತ ರೋಗ ತಡೆಗೆ ಹಾಗೂ ಮುಂದಿನ ಆರೋಗ್ಯ ತುರ್ತುಸ್ಥಿತಿ ಎದುರಿಸಲು ಸಜ್ಜಾಗಿರುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.