ಕಾಸರಗೋಡು: ಮೃಗ ಸಂರಕ್ಷಣಾ ಇಲಾಖೆ ಜಿಲ್ಲೆಯಲ್ಲಿ ಕಾರ್ಯಗತಗೊಳಿಸಿರುವ ಕಾಸರಗೋಡು ಬ್ಲಾಕ್‍ನಲ್ಲಿ ಮೊಬೈಲ್ ವೆಟರಿನರಿ ಯುನಿಟ್ ಕಾರ್ಯಾಚರಣೆಗಾಗಿ ವೆಟರಿನರಿ ಸರ್ಜನ್ ಗುತ್ತಿಗೆ ಆಧಾರದಲ್ಲಿ ತಾತ್ಕಾಲಿಕ ನೇಮಕಾತಿ ನಡೆಸಲಿದೆ.
ಕಾಸರಗೋಡು ಬ್ಲಾಕ್ ಮಟ್ಟದಲ್ಲಿ ನೇಮಕಾತಿ ನಡೆಯಲಿದ್ದು, ವೆಟರಿನರಿ ಸೈನ್ಸ್‍ನಲ್ಲಿ ಪದವಿ ಮತ್ತು ಕೇರಳ ವೆಟರಿನರಿ ಕೌನ್ಸಿಲ್ ನೋಂದಣಿ ವಿದ್ಯಾರ್ಹತೆಯಾಗಿದೆ. ಆಗಸ್ಟ್ 22 ರಂದು ಬೆಳಿಗ್ಗೆ 11.30ಕ್ಕೆ ಕಾಸರಗೋಡು ಜಿಲ್ಲಾ ಮೃಗ ಸಂರಕ್ಷಣಾ ಕಛೇರಿಯಲ್ಲಿ ಸಂದರ್ಶನ ನಡೆಯಲಿದೆ. ಹೆಚ್ಚಿನ ವಿವರಗಳಿಗೆ ವೆಬ್‍ಸೈಟ್ https://kvsc.kerala.gov.in ಸಂದರ್ಶಿಸಬಹುದಾಗಿದೆ. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ (04994 255483)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.