ಮಂಜೇಶ್ವರ: ‘ವಿಶ್ವಹಿಂದೂ ಪರಿಷತ್ ಮಾತೃ ಮಂಡಳಿ ಉಪಖಂಡ ಸಮಿತಿ ಸಂತಡ್ಕ’ ವತಿಯಿಂದ ಇಪ್ಪತ್ತನೇ ವರ್ಷದ ಶ್ರೀ ವರಮಹಾಲಕ್ಷ್ಮಿ ಪೂಜೆ ಆ. 25 ರಂದು ಶುಕ್ರವಾರ ಬೆಳಿಗ್ಗೆ 9.30ಕ್ಕೆ ‘ಅರಸು ಸಂಕಲ ಭವನ ಅರಸು ಸಂಕಲ ದೈವ ಕ್ಷೇತ್ರ ಸಂತಡ್ಕ’ದಲ್ಲಿ ವೇದಮೂರ್ತಿ ಕುರಿಯ ರಾಮಮೂರ್ತಿಯವರ ದಿವ್ಯ ಹಸ್ತದಿಂದ ಜರಗಲಿದೆ.
ಈ ಸಂದರ್ಭ ನಡೆಯಲಿರುವ ಧಾರ್ಮಿಕ ಸಭೆಯಲ್ಲಿ ಅರಸು ಸಂಕಲ ದೈವಕ್ಷೇತ್ರ ಸಂತಡ್ಕ ಇದರ ಅಧ್ಯಕ್ಷ ಡಾ. ಶ್ರೀಧರ ಭಟ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಕುಟುಂಬಶ್ರೀ ಸಿ.ಡಿ.ಎಸ್ ಅಧ್ಯಕ್ಷೆ ಶಾಲಿನಿ ಬಿ ಶೆಟ್ಟಿ ಕಳ್ಳಿಗೆ ಉಪಸ್ಥಿತರಿರುವರು. ವಿಶ್ವ ಹಿಂದು ಪರಿಷತ್ ಮಾತೃ ಶಕ್ತಿ ಕಣ್ಣೂರ್ ವಿಭಾಗ ಪ್ರಮುಖ್ ಮೀರಾ ಆಳ್ವ ಧಾರ್ಮಿಕ ಉಪನ್ಯಾಸ ನೀಡುವರು. ಮಧ್ಯಾಹ್ನ ಅನ್ನ ಸಂತರ್ಪಣೆ ಜರಗಲಿದೆ ಎಂದು ಕ್ಷೇತ್ರ ಪ್ರಕಟಣೆ ತಿಳಿಸಿದೆ.