ಮಾಸ್ಕೊ: 'ಲೂನಾ -25' ಗಗನ ನೌಕೆಯಲ್ಲಿನ ವೈಜ್ಞಾನಿಕ ಉಪಕರಣಗಳು ಕಾರ್ಯಾರಂಭ ಮಾಡಿದ ಬಳಿಕ ಲಭ್ಯವಾದ ಮೊದಲ ದತ್ತಾಂಶಗಳನ್ನು ವಿಜ್ಞಾನಿಗಳು ವಿಶ್ಲೇಷಿಸಲು ಆರಂಭಿಸಿದ್ದಾರೆ ಎಂದು ರಷ್ಯಾದ ಬಾಹ್ಯಾಕಾಶ ಸಂಸ್ಥೆ 'ರೊಸ್ಕೋಸ್ಮಾಸ್' ಭಾನುವಾರ ತಿಳಿಸಿದೆ.

'ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹ ಚಂದ್ರನತ್ತ 'ಲೂನಾ-25' ಗಗನ ನೌಕೆ ಪಯಣಿಸುತ್ತಿದೆ.
ಚಂದ್ರನ ದಕ್ಷಿಣ ಧ್ರುವದ ಮೇಲೆ ಸಾಫ್ಟ್ ಲ್ಯಾಂಡ್ ಮಾಡಿದ ಮೊದಲ ರಾಷ್ಟ್ರವಾಗಬೇಕು ಎಂಬ ನಿಟ್ಟಿನಲ್ಲಿ ರಷ್ಯಾ, ಶುಕ್ರವಾರ ಆಗಸ್ಟ್ 11 ರಂದು ಚಂದ್ರನತ್ತ ರಾಕೆಟ್ ಉಡಾಯಿಸಿತ್ತು. ಚಂದ್ರನ ದಕ್ಷಿಣ ಧ್ರುವದಲ್ಲಿ ನೀರು ಘನೀಕರಣಗೊಂಡು ಶೇಖರಣೆ ಆಗಿರುವುದಾಗಿ ನಂಬಲಾಗಿದೆ.
'ಚಂದ್ರನ ಕಡೆಗಿನ ಯಾನದ ಕುರಿತ ಮೊದಲ ದತ್ತಾಂಶ ಲಭ್ಯವಾಗಿದೆ. ಯೋಜನೆಯ ವೈಜ್ಞಾನಿಕ ತಂಡವು ಅದನ್ನು ವಿಶ್ಲೇಷಿಸುತ್ತಿದೆ' ಎಂದು ರೊಸ್ಕೋಸ್ಮೋಸ್ ತಿಳಿಸಿದೆ.
ಆಗಸ್ಟ್ 21-23ರ ನಡುವೆ 'ಲೂನಾ-25' ನೌಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲಿದೆ. 'ಚಂದ್ರಯಾನ-3'ರ ಸಾಫ್ಟ್‌ಲ್ಯಾಂಡಿಂಗ್ ಆಗಸ್ಟ್ 23ರಂದು ನಿಗದಿಯಾಗಿದೆ.