ಗುರುಗ್ರಾಮ(PTI): ವಿಶ್ವ ಹಿಂದೂ ಪರಿಷತ್‌ನ (ವಿಎಚ್‌ಪಿ) ಬ್ರಜ್ ಮಂಡಲ್ ಯಾತ್ರೆಯನ್ನು ಇದೇ 28 ರಂದು ನೂಹ್‌ನಿಂದ ಪುನರಾರಂಭಿಸುವುದಾಗಿ ಹರಿಯಾಣದ ಪಲ್ವಾಲ್ ಸಮೀಪ ಭಾನುವಾರ ಹಮ್ಮಿಕೊಂಡಿದ್ದ ಮಹಾಪಂಚಾಯತ್‌ನಲ್ಲಿ ಘೋಷಿಸಲಾಗಿದೆ.
ಗುರುಗ್ರಾಮ(PTI): ವಿಶ್ವ ಹಿಂದೂ ಪರಿಷತ್‌ನ (ವಿಎಚ್‌ಪಿ) ಬ್ರಜ್ ಮಂಡಲ್ ಯಾತ್ರೆಯನ್ನು ಇದೇ 28 ರಂದು ನೂಹ್‌ನಿಂದ ಪುನರಾರಂಭಿಸುವುದಾಗಿ ಹರಿಯಾಣದ ಪಲ್ವಾಲ್ ಸಮೀಪ ಭಾನುವಾರ ಹಮ್ಮಿಕೊಂಡಿದ್ದ ಮಹಾಪಂಚಾಯತ್‌ನಲ್ಲಿ ಘೋಷಿಸಲಾಗಿದೆ.
ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ನಡೆದ ಮಹಾಪಂಚಾಯತ್‌ನಲ್ಲಿ ಪಲ್ವಾಲ್, ಗುರುಗ್ರಾಮ ಮತ್ತು ಸುತ್ತಮುತ್ತಲಿನ ಪ್ರದೇಶದ ಜನರು ಪಾಲ್ಗೊಂಡಿದ್ದರು ಎಂದು ಮೂಲಗಳು ಹೇಳಿವೆ.
ನೂಹ್‌ನ ನಲ್ಹಾರ್‌ನಿಂದ ಪುನರಾರಂಭವಾಗಲಿರುವ ಯಾತ್ರೆಯು ಫಿರೋಜ್‌ಪುರ ಜಿರ್ಕಾ ಬಳಿಯ ದೇವಾಲಯಗಳನ್ನು ಹಾದು ಹೋಗಲಿದೆ ಎಂದು ವಿಎಚ್‌ಪಿ ಮುಖಂಡ ದೇವೇಂದರ್ ಸಿಂಗ್ ತಿಳಿಸಿದ್ದಾರೆ.'ಕೇಂದ್ರೀಯ ಪಡೆಯ ನಾಲ್ಕು ಬೆಟಾಲಿಯನ್‌ಗಳನ್ನು ನೂಹ್‌ನಲ್ಲಿ ಶಾಶ್ವತವಾಗಿ ನಿಯೋಜಿಸಬೇಕು' ಎಂದು ಅವರು ಆಗ್ರಹಿಸಿದ್ದಾರೆ.
ನೂಹ್‌ನಲ್ಲಿ ಈಚೆಗೆ ಕೋಮು ಗಲಭೆ ಭುಗಿಲೆದ್ದ ಕಾರಣ ಈ ಯಾತ್ರೆ ಸ್ಥಗಿತಗೊಂಡಿತ್ತು.