HEALTH TIPS

ಭಕ್ತರನ್ನು ಸ್ವಾಗತಿಸಲು ಪತ್ತನಂತಿಟ್ಟದಲ್ಲಿ ಅಯ್ಯಪ್ಪನ ಶಿಲ್ಪ ಅನಾವರಣ: 28 ಅಡಿ ಎತ್ತರ

                ಪತ್ತನಂತಿಟ್ಟ: ಈ ಬಾರಿ ಶಬರಿಮಲೆ ಸನ್ನಿಧಿಗೆ ಆಗಮಿಸಿದ ಅಯ್ಯಪ್ಪ ಭಕ್ತರನ್ನು ಸಾರಥಿ ಅಯ್ಯಪ್ಪನ ಪ್ರತಿಮೆ ಸ್ವಾಗತಿಸಿತು. ಶಬರಿಮಲೆಗೆ ಆಗಮಿಸುವ ಭಕ್ತರಿಗೆ ಭಕ್ತಿಯ ಸಂಕೇತವಾಗಿ ಹೃದಯ ತೆರೆದುಕೊಳ್ಳಲು ಆಯಪ್ಪ ಮೂರ್ತಿಯನ್ನು ನಿರ್ಮಿಸಲಾಗಿದೆ.

                    ಬಿಲ್ಲು-ಬಾಣ ಹೊತ್ತ ಹುಲಿ ವಾಹನ ಅಯಪ್ಪನನ್ನು ಶಿಲ್ಪದ ಮೂಲಕ ಭಕ್ತರ ಮುಂದೆ ಇಡಲಾಗಿದೆ. ಈ ಅಯ್ಯಪ್ಪ ಶಿಲ್ಪವನ್ನು ಪಂಬಾ ತ್ರಿವೇಣಿಯಲ್ಲಿ ಸ್ಥಾಪಿಸಲಾಗಿದೆ. ಉದ್ಯಮಿ ಮತ್ತು ಅಂಬಲಕರ ಫಿಲಂಸ್‍ನ ಮಾಲೀಕ ಕೊಟ್ಟಾರಕ್ಕರ ಮೂಲದ ಬೈಜು ಅಂಬಲಕರ ಅವರು ಹರಕೆಯಾಗಿ ಈ ಶಿಲ್ಪವನ್ನು ಅರ್ಪಿಸಿರುವರು. ಶಿಲ್ಪದ ಎತ್ತರ 28 ಅಡಿ.

            ಇದು ಪೂರ್ಣಗೊಳ್ಳಲು ಸುಮಾರು ಒಂದು ವರ್ಷ ಕಾಲಾವಧಿ ತೆಗೆದುಕೊಂಡಿತು. ಪಂಬಾ ತ್ರಿವೇಣಿಯಲ್ಲಿರುವ ದೇವಸ್ವಂ ಮಂಡಳಿಯ ಜಾಗದಲ್ಲಿ ನೂತನ ಅಯ್ಯಪ್ಪ ಶಿಲ್ಪವನ್ನು ಸ್ಥಾಪಿಸಲಾಗಿದೆ. ಹುಲಿಯ ಮೇಲೆ ಯೋಧನಾಗಿರುವ ಅಯ್ಯಪ್ಪನ ಶಿಲ್ಪವು ಫೆರೋ-ಸಿಮೆಂಟ್ ಮತ್ತು ಸಿಲಿಕಾನ್‍ನಿಂದ ಮಾಡಲ್ಪಟ್ಟಿದೆ. ಕೊಲ್ಲಂ ಮೂಲದ ಸಂತಾನು ಎಂಬುವವರು ಈ ಶಿಲ್ಪವನ್ನು ರಚಿಸಿದ್ದಾರೆ.

                ಬೈಜು ಕಳೆದ 48 ವರ್ಷಗಳಿಂದ ನಿರಂತರವಾಗಿ ಶಬರಿಮಲೆಗೆ ಭೇಟಿ ನೀಡುತ್ತಿರುವ ಭಕ್ತ. ದೇವಸ್ವಂ ಮಂಡಳಿ ಅಧ್ಯಕ್ಷ ಕೆ.ಅನಂತ ಗೋಪನ್ ಅಯ್ಯಪ್ಪ ಶಿಲ್ಪವನ್ನು ಅನಾವರಣಗೊಳಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries