ನವದೆಹಲಿ: ಭಾರತ ಮತ್ತು ಚೀನಾ ನಡುವಿನ ವಾಸ್ತವ ಗಡಿ ನಿಯಂತ್ರಣಾ ರೇಖೆಯಿಂದ ಕೇವಲ 50 ಕಿ.ಮೀ ದೂರದಿಂದ 'ಮಿಗ್- 29' ಅಥವಾ 'ಸುಖೋಯ್-30 ಎಂಕೆಐ' ಯುದ್ಧ ವಿಮಾನಗಳ ಉಡಾವಣೆಗೆ ಅನುಕೂಲವಾಗಲು ದಕ್ಷಿಣ ಲಡಾಖ್‌ನ ನ್ಯೋಮಾ ಎಂಬಲ್ಲಿ ಭಾರತ 10,000 ಅಡಿಗಳ ರನ್‌ವೇ ನಿರ್ಮಾಣ ಕಾರ್ಯ ಆರಂಭಿಸಿದೆ.

ರನ್‌ವೇ ನಿರ್ಮಾಣ ಕಾರ್ಯಕ್ಕೆ ಪರಿಸರ ಇಲಾಖೆ ಅನುಮತಿ ಸೇರಿದಂತೆ ಅಗತ್ಯ ಅನುಮೋದನೆಗಳನ್ನು ಪಡೆದಿರುವ ಭಾರತೀಯ ವಾಯುಪಡೆ (ಐಎಎಫ್) ಈ ವಾರ ಕಾಮಗಾರಿ ಆರಂಭಿಸಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಕಾಮಗಾರಿ ಸ್ಥಳಕ್ಕೆ ಶೀಘ್ರವೇ ಭೇಟಿ ಪರಿಶೀಲನೆ ನಡೆಸಲಿದ್ದಾರೆ.
ನ್ಯೋಮಾವನ್ನು ವಾಯುನೆಲೆಯಾಗಿ ರೂಪಿಲು ವಾಯುಪಡೆಯು 2010ರಲ್ಲೇ ಪ್ರಸ್ತಾವ ಸಲ್ಲಿಸಿತ್ತು. ಆದರೆ, ಗಡಿ ವಿಚಾರವಾಗಿ ಭಾರತ ಮತ್ತು ಚೀನಾ ನಡುವೆ ಯಾವಾಗ ಸಂಘರ್ಷ ಏರ್ಪಟ್ಟಿತೋ ಆಗಿನಿಂದ ರನ್ ವೇ ನಿರ್ಮಾಣಕ್ಕೆ ಹೆಚ್ಚಿನ ವೇಗ ದೊರೆತಿದ್ದು, ಸದ್ಯ ಕಾಮಗಾರಿ ಆರಂಭಗೊಂಡಿದೆ.