ಮುಂಬೈ: ಮಹಾರಾಷ್ಟ್ರ ಗ್ರಾಮ ಪಂಚಾಯಿತಿ ಕಾಯ್ದೆಯಲ್ಲಿ ಉಲ್ಲೇಖಿಸಿರುವಂತೆ, 'ಇಬ್ಬರು ಮಕ್ಕಳು' ಎಂಬ ಮಿತಿಯು ಸದಸ್ಯರ ಸ್ವಂತ ಮಕ್ಕಳನ್ನು ಮಾತ್ರ ಒಳಗೊಂಡಿದ್ದು, ಮಲ ಮಕ್ಕಳಿಗೆ ಅನ್ವಯಿಸದು ಎಂದು ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠವು ಶನಿವಾರ ಹೇಳಿದೆ.

ನ್ಯಾಯಮೂರ್ತಿಗಳಾದ ಎ.ಎಸ್.ಚಂದೂರಕರ್ ಹಾಗೂ ವೃಶಾಲಿ ಜೋಶಿ ಅವರಿದ್ದ ವಿಭಾಗೀಯ ಪೀಠವು ಗ್ರಾಮ ಪಂಚಾಯಿತಿ ಸದಸ್ಯೆ ಖೈರುನ್ನೀಸಾ ಶೇಖ್‌ಚಾಂದ್ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿತು.
ಅರ್ಜಿಯನ್ನು ಅರ್ಹತೆ ಆಧಾರದಲ್ಲಿ ಏಕಸದಸ್ಯ ಪೀಠವೇ ವಿಚಾರಣೆ ನಡೆಸಬೇಕು ಎಂದು ವಿಭಾಗೀಯ ಪೀಠ ನಿರ್ದೇಶನ ನೀಡಿತು.
'ನನಗೆ ಮೂರು ಮಕ್ಕಳಿರುವ ಕಾರಣ ನೀಡಿ ನನ್ನನ್ನು ಗ್ರಾಮ ಪಂಚಾಯಿತಿ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ. ಮೂರು ಮಕ್ಕಳ ಪೈಕಿ, ಇಬ್ಬರು ಮಕ್ಕಳು ಪತಿಯ ಮೊದಲ ವಿವಾಹದಿಂದ ಜನಿಸಿದ್ದು, ನಮ್ಮ ಮದುವೆ ನಂತರ ಒಂದು ಮಗುವಿದೆ' ಎಂದು ಖೈರುನ್ನೀಸಾ ಅವರು ಅರ್ಜಿಯಲ್ಲಿ ವಿವರಿಸಿದ್ದರು.
ಈ ಮೊದಲು ಹೈಕೋರ್ಟ್‌ನ ಏಕಸದಸ್ಯ ಪೀಠವು ಅರ್ಜಿಯ ವಿಚಾರಣೆ ನಡೆಸಿತ್ತು. ಆದರೆ, ಕಾಯ್ದೆಯಲ್ಲಿರುವ 'ಇಬ್ಬರು ಮಕ್ಕಳು' ಎಂಬ ಪದಪ್ರಯೋಗ ಕುರಿತು ಸ್ಪಷ್ಟನೆ ಕೋರಿ ಅರ್ಜಿಯನ್ನು ವಿಭಾಗೀಯ ಪೀಠಕ್ಕೆ ವರ್ಗಾಯಿಸಿತ್ತು.