ಜೈಪುರ: ಇಬ್ಬರು ಮಕ್ಕಳ ತಾಯಿಯೊಬ್ಬರು ತನ್ನ ಮುಸ್ಲಿಂ ಸ್ನೇಹಿತನೊಂದಿಗೆ ಕುವೈತ್‌ಗೆ ಪರಾರಿಯಾಗಿರುವ ಘಟನೆ ರಾಜಸ್ಥಾನದ ಡುಂಗರ್‌ಪುರ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೈಪುರ: ಇಬ್ಬರು ಮಕ್ಕಳ ತಾಯಿಯೊಬ್ಬರು ತನ್ನ ಮುಸ್ಲಿಂ ಸ್ನೇಹಿತನೊಂದಿಗೆ ಕುವೈತ್‌ಗೆ ಪರಾರಿಯಾಗಿರುವ ಘಟನೆ ರಾಜಸ್ಥಾನದ ಡುಂಗರ್‌ಪುರ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೀಪಿಕಾ ಪಾಟೀದಾರ್ ಎಂಬವರೇ ತನ್ನ ಪ್ರಿಯಕರ ಇರ್ಫಾನ್ ಹೈದರ್ ಎಂಬವರ ಜತೆ ಓಡಿ ಹೋದವರು.
ಸಾಮಾಜಿಕ ಜಾಲತಾಣಗಳಲ್ಲಿ ದೀಪಿಕಾ ಅವರು ಬುರ್ಖಾ ಹಾಕಿಕೊಂಡಿರುವ ಚಿತ್ರಗಳನ್ನು ನೋಡಿದ ಬಳಿಕ ಅವರು ಕುವೈತ್‌ಗೆ ಹೋಗಿದ್ದಾರೆ ಎನ್ನುವುದು ಮನೆಯವರಿಗೆ ಗೊತ್ತಾಗಿದೆ.
ದೀಪಿಕಾ ಅವರ ಪತಿ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದು, ಜುಲೈ 15ರಂದು ಪತ್ನಿ ನಾಪತ್ತೆಯಾಗಿರುವ ಬಗ್ಗೆ ದೂರು ಸಲ್ಲಿಸಿದ್ದರು. ಹೈದರ್ ತಮ್ಮ ಪತ್ನಿಯನ್ನು ಪುಸಲಾಯಿಸಿ ಇಸ್ಲಾಂಗೆ ಮತಾಂತರ ಮಾಡಿದ್ದಾನೆ ಎಂದು ಅವರು ಆರೋಪಿಸಿದ್ದಾರೆ.
ಹೈದರ್ ಗುಜರಾತ್‌ನ ಹಿಮ್ಮತ್ ನಗರ ನಿವಾಸಿಯಾಗಿದ್ದು, ಆತನನ್ನು ಭೇಟಿ ಮಾಡಲು ದೀಪಿಕಾ ಆಗ್ಗಾಗ್ಗೆ ಗುಜರಾತ್‌ಗೆ ತೆರಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.