ಮುಂಬೈ: ಬಾಲಿವುಡ್ ನಟ, ಬಿಜೆಪಿ ಸಂಸದ ಸನ್ನಿ ಡಿಯೋಲ್-ಅಮೀಶಾ ಪಟೇಲ್ ಅಭಿನಯದ ಗದರ್-2 ಚಿತ್ರವು ಬಿಡುಗಡೆಯಾದ ದಿನದಿಂದಲ್ಲೂ ಒಂದಿಲ್ಲೊಂದು ವಿಚಾರಕ್ಕೆ ಸಿನಿ ರಸಿಕರ ಗಮನ ಸೆಳೆಯುತ್ತಿದ್ದು, ಇದೀಗ ಹೊಸ ದಾಖಲೆಯೊಂದನ್ನು ನಿರ್ಮಿಸಿದೆ.
ಮುಂಬೈ: ಬಾಲಿವುಡ್ ನಟ, ಬಿಜೆಪಿ ಸಂಸದ ಸನ್ನಿ ಡಿಯೋಲ್-ಅಮೀಶಾ ಪಟೇಲ್ ಅಭಿನಯದ ಗದರ್-2 ಚಿತ್ರವು ಬಿಡುಗಡೆಯಾದ ದಿನದಿಂದಲ್ಲೂ ಒಂದಿಲ್ಲೊಂದು ವಿಚಾರಕ್ಕೆ ಸಿನಿ ರಸಿಕರ ಗಮನ ಸೆಳೆಯುತ್ತಿದ್ದು, ಇದೀಗ ಹೊಸ ದಾಖಲೆಯೊಂದನ್ನು ನಿರ್ಮಿಸಿದೆ.
ಬಾಕ್ಸ್ಆಫೀಸ್ ಪಂಡಿತರು ಗದರ್-2 ಚಿತ್ರದ ಯಶಸ್ಸನ್ನು ಐತಿಹಾಸಿಕ ಎಂದು ಬಣ್ಣಿಸಿದ್ದಾರೆ. ಒಂದು ವಾರ ಕಳೆಯುವುದರಲ್ಲಿ 300 ಕೋಟಿ ರೂಪಾಯಿ ಕಮಾಯಿ ಮಾಡುವುದು ಎಂದರೆ ಸುಲಭದ ಮಾತಲ್ಲ. ದಕ್ಷಿಣ ಭಾರತದ ಸಿನಿಮಾಗಳ ಪ್ರಭಾವದ ಎದುರು ಬಾಲಿವುಡ್ ಚಿತ್ರಗಳ ಮಾರುಕಟ್ಟೆ ಕೊಂಚ ಡಲ್ ಆಗಿತ್ತು ಎಂದೇ ಹೇಳಬಹುದು. ಚಿತ್ರ ಇಷ್ಟರಮಟ್ಟಿಗೆ ಕಲೆಕ್ಷನ್ ಮಾಡುತ್ತದೆ ಎಂದು ಯಾರೂ ಸಹ ಊಹಿಸಿರಲಿಲ್ಲ.
ಗದರ್-2 ಚಿತ್ರದ ಯಶಸ್ಸಿನಿಂದ ಬಾಲಿವುಡ್ ಅಂಗಳದಲ್ಲಿ ಹೊಸ ಚೈತನ್ಯ ಮೂಡಿದ್ದು, ನಟ ಸನ್ನಿ ಡಿಯೋಲ್ಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಸಿನಿಮಾದ ಅಬ್ಬರ ಸದ್ಯಕ್ಕೆ ನಿಲ್ಲುವ ಯಾವುದೇ ಸೂಚನೆ ಕಂಡು ಬಂದಿಲ್ಲ. ಶುಕ್ರವಾರವೂ ಸಹ ಅನೇಕ ಕಡೆ ಚಿತ್ರಮಂದಿರಗಳು ಹೌಸ್ಫುಲ್ ಆಗಿದ್ದು, ವಾರಾಂತ್ಯದಲ್ಲಿ ಹೆಚ್ಚಿನ ಕಲೆಕ್ಷನ್ ಮಾಡುವ ಸಾಧ್ಯತೆ ದಟ್ಟವಾಗಿದೆ.
ಸಾಲು ಸಾಲು ರಜೆಯ ಲಾಭ ಪಡೆದ ಚಿತ್ರತಂಡವು ಅದನ್ನು ಸದುಪಯೋಗಪಡಿಸಿಕೊಂಡಿದೆ. ಅಕ್ಷಯ್ ಕುಮಾರ್ ನಟನೆಯ OMG-2 ಹಾಗೂ ಸೂಪರ್ಸ್ಟಾರ್ ರಜಿನಿಕಾಂತ್ ಅಭಿನಯದ ಜೈಲರ್ ಸಿನಿಮಾಗಳ ಪೈಪೋಟಿ ನಡುವೆ ಚಿತ್ರ ಮುನ್ನುಗ್ಗುತ್ತಿರುವುದು ಮತ್ತಷ್ಟು ವಿಶೇಷವೆನಿಸಿದೆ.