HEALTH TIPS

ಚಂದ್ರಯಾನ-3 ರ 2 ಉದ್ದೇಶಗಳು ಈಡೇರಿವೆ, ಮೂರನೆಯದ್ದು ಪ್ರಗತಿಯಲ್ಲಿದೆ: ಇಸ್ರೋ

             ಬೆಂಗಳೂರು:  ಚಂದ್ರಯಾನ-3 ಮಿಷನ್ ನ 2 ಉದ್ದೇಶಗಳು ಈಗಾಗಲೇ ಈಡೇರಿದ್ದು, ಮೂರನೆಯದ್ದಾಗಿರುವ ಸ್ಥಳದಲ್ಲಿನ ವೈಜ್ಞಾನಿಕ ಪ್ರಯೋಗಗಳು ಪ್ರಗತಿಯಲ್ಲಿದೆ ಎಂದು ಇಸ್ರೋ ಹೇಳಿದ್ದಾರೆ 

              ಚಂದ್ರಯಾನ-3 ಮಿಷನ್ ನ ಪೇಲೋಡ್ ಗಳು ಸರಿಯಾಗಿ  ಕಾರ್ಯನಿರ್ವಹಿಸುತ್ತಿದೆ ಎಂದು ಇಸ್ರೋ ಹೇಳಿದೆ. 

             ಮೂರು ಉದ್ದೇಶಗಳನ್ನು ಹೊಂದಿರುವ ಚಂದ್ರಯಾನ-3 ಮಿಷನ್ ನಲ್ಲಿ ಚಂದ್ರನ ಮೇಲ್ಮೈ ಮೇಲೆ ಸಾಫ್ಟ್ ಲ್ಯಾಂಡಿಂಗ್, ರೋವರ್ ನ್ನು ಚಾಲೂ ಮಾಡುವುದು ಈಡೇರಿದೆ. ಈಗ ರೋವರ್ ಇಳಿದಿರುವ ಸ್ಥಳದಲ್ಲಿ ವೈಜ್ಞಾನಿಕ ಪ್ರಯೋಗಗಳು ಪ್ರಗತಿಯಲ್ಲಿದೆ ಎಂದು ಟ್ವಿಟರ್ ನಲ್ಲಿ ಇಸ್ರೋ ಹೇಳಿದೆ. 

              ಚಂದ್ರಯಾನ-3 ಯಶಸ್ಸಿನ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಇಸ್ರೋ ಕೇಂದ್ರಕ್ಕೆ ಭೇಟಿ ನೀಡಿದ್ದು, ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಮಾಡಿದ ಸ್ಥಳವನ್ನು ಶಿವ-ಶಕ್ತಿ ಬಿಂದು ಎಂದು ನಾಮಕರಣ ಮಾಡಿದರೆ, ಚಂದ್ರಯಾನ-2 ರಲ್ಲಿ ಲ್ಯಾಂಡರ್ ಕ್ರ್ಯಾಶ್ ಆದ ಸ್ಥಳಕ್ಕೆ ತಿರಂಗಾ ಪಾಯಿಂಟ್ ಎಂದು ಹೆಸರು ನೀಡಿದ್ದಾರೆ. ಚಂದ್ರಯಾನ-3 ಯಶಸ್ವಿಯಾದ ದಿನವನ್ನು ಮೋದಿ ರಾಷ್ಟ್ರೀಯ ಬಾಹ್ಯಾಕಾಶ ದಿನ ಎಂದು ಘೋಷಿಸಿದ್ದಾರೆ. 



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries