ಪೆರ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ ಆಶ್ರಯದಲ್ಲಿ ಪೆರ್ಲ ವಲಯ ಬೆದ್ರಂಪಳ್ಳ ಒಕ್ಕೂಟದ ವತಿಯಿಂದ ಓಣಂ ಹಬ್ಬ ಆಚರಣೆ ಆಗಸ್ಟ್ 30ರಂದು ಮಣಿಯಂಪಾರೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರ ವಠಾರದಲ್ಲಿ ಜರುಗಲಿದೆ. ಯೋಜನೆಯ ಮಂಜೇಶ್ವರ ತಾಲೂಕು ಯೋಜನಾಧಿಕಾರಿ ಶಶಿಕಲಾ ಸುವರ್ಣ ಉದ್ಘಾಟಿಸುವರು. ಬೆದ್ರಂಪಳ್ಳ ಒಕ್ಕೂಟ ಅಧ್ಯಕ್ಷ ಟಿ. ಎಸ್. ಮೂಲ್ಯ ಅಧ್ಯಕ್ಷತೆ ವಹಿಸುವರು. ಮಂಜೇಶ್ವರ ಬ್ಲೋಕ್ ಪಂಚಾಯಿತಿ ಸದಸ್ಯ ಕೆ. ಪಿ. ಅನಿಲ್ ಕುಮಾರ್ ಓಣಂ ಹಬ್ಬದ ಬಗ್ಗೆ ಮಾತನಾಡಲಿರುವರು. ಗ್ರಾಮ ಪಂಚಾಯಿತಿ ಸದಸ್ಯ ರಾಧಾಕೃಷ್ಣ ನಾಯಕ್ ಜೆ. ಎಸ್, ಮಂದಿರ ಸಮಿತಿ ಅಧ್ಯಕ್ಷ ಬಾಲಕೃಷ್ಣ ನಾಯ್ಕ ಅರೆಮಂಗಿಲ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿರುವರು. ನಂತರ ಸಂಘದ ಸದಸ್ಯರಿಗೆ ಹಗ್ಗ ಜಗ್ಗಾಟ, ಬಾಲ್ ಪಾಸಿಂಗ್, ಬಸ್ಟ್ಯಾಂಡ್ ಬ್ಲಾಸ್ಟ್ ಸ್ಪರ್ಧೆಗಳು ನಡೆಯಲಿರುವುದಗಿ ಪ್ರಕಟಣೆ ತಿಳಿಸಿದೆ.