ಬದಿಯಡ್ಕ: ಮಾನ್ಯ ಕಾರ್ಮಾರು ಶ್ರೀ ಮಹಾವಿಷ್ಣು ಕ್ಷೇತ್ರದ ಜೀರ್ಣೋದ್ಧಾರ ಕಾರ್ಯದ ಭಾಗವಾಗಿ ಗರ್ಭಗುಡಿಯ ಪಾದುಕಾನ್ಯಾಸ ಕಾರ್ಯಕ್ರಮವು ಆಗಸ್ಟ್ 30ರಂದು ಬುಧವಾರ ಜರಗಲಿರುವುದು. ಶ್ರೀಮದ್ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಆಶೀರ್ವಾದಗಳೊಂದಿಗೆ ಕ್ಷೇತ್ರ ತಂತ್ರಿವರ್ಯ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳವರ ನೇತೃತ್ವದಲ್ಲಿ ಸಮಾರಂಭ ನಡೆಯಲಿದೆ.
ಬೆಳಗ್ಗೆ 10.50ಕ್ಕೆ ಪಾದುಕಾನ್ಯಾಸ, 11 ಗಂಟೆಯಿಂದ ಸಭಾಕಾರ್ಯಕ್ರಮದಲ್ಲಿ ಜೀರ್ಣೋದ್ಧಾರ ಸಮಿತಿ ರಕಾಧ್ಷಿಕಾರಿ ನಾರಾಯಣ ಮಾಸ್ತರ್ ಚರ್ಲಡ್ಕ, ಮಂಗಳೂರು ಅಧ್ಯಕ್ಷತೆ ವಹಿಸುವರು. ಮಂಗಳೂರು ಉದ್ಯಮಿ ಮಧುಸೂದನ ಆಯರ್ ಗೌರವ ಅಭ್ಯಾಗತರಾಗಿ ಹಾಗೂ ವೇದಮೂರ್ತಿ ಗಣೇಶ್ ಭಟ್ ಮುಂಡೋಡು, ಧಾರ್ಮಿಕ ಮುಂದಾಳು ಖ್ಯಾತ ವೈದ್ಯ ಡಾ. ಶ್ರೀನಿಧಿ ಸರಳಾಯ ಬದಿಯಡ್ಕ, ಪೆರಡಾಲ ಕ್ಷೇತ್ರ ಟ್ರಸ್ಟಿ ಜಗನ್ನಾಥ ರೈ ಪೆರಡಾಲಗುತ್ತು ಉಪಸ್ಥಿತರಿರುವರು. ಮಧ್ಯಾಹ್ನ 12.30ರಿಂದ ಅನ್ನದಾನ ನಡೆಯಲಿದೆ.