ಬದಿಯಡ್ಕ : ಇಲ್ಲಿಗೆ ಸಮೀಪದ ಪುಳಿತ್ತಡಿಯ ನಾರಾಯಣೀಯಂ ಸಂಗೀತ ಶಾಲೆಯಲ್ಲಿ ಆ.30ರಿಂದ 7 ದಿನಗಳ ಕಾಲ 'ಇನ್ನರ್ ಇಂಜಿನಿಯರಿಂಗ್ (ಮಲಯಾಳಂ)' ವಿಶೇಷ ಯೋಗ ಶಿಬಿರವು ಪ್ರತಿದಿನ ಸಂಜೆ 6ರಿಂದ 9ರ ತನಕ ನಡೆಯಲಿದೆ. ಈ ಶಿಬಿರವು ಕಾಸರಗೋಡು ಜಿಲ್ಲೆಯಲ್ಲಿ ಮೊದಲ ಬಾರಿ ನಡೆಯುತ್ತಿದ್ದು, ಶಿಬಿರದಲ್ಲಿ ಶಾಂಭವಿ ಮಹಾಮುದ್ರ ಕ್ರಿಯಾ ಸಾಧನೆ ಹಾಗೂ ಇದಕ್ಕೆ ಪೂರಕವಾದ ವಿವಿಧ ಯೋಗ ಸಾಧನೆಯನ್ನು ತಿಳಿಸಲಾಗುವುದು. ಶಿಬಿರದಲ್ಲಿ ಆಧ್ಯಾತ್ಮಿಕ ಗುರುಗಳಾದ ಸದ್ಗುರು ಜಗ್ಗಿ ವಾಸುದೇವ್ ಅವರ ಕೊಯಂಬುತ್ತೂರಿನ ಈಶ ಪೌಂಡೇಶನ್ ಸಂಸ್ಥೆಯ ಸದಸ್ಯರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸುವರು. ಆಸಕ್ತರು ನೊಂದಾವಣೆ ಹಾಗೂ ಹೆಚ್ಚಿನ ಮಾಹಿತಿಗಾಗಿ 9740067758 ಅಥವಾ 9633030678ನ್ನು ಸಂಪರ್ಕಿಸಬಹುದೆಂದು ವಿದ್ವಾನ್ ಬಳ್ಳಪದವು ಯೋಗೀಶ ಶರ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.