ನವದೆಹಲಿ: ವೇಗವಾಗಿ ಬೆಳೆಯುತ್ತಿರುವ ಆಧುನಿಕ ಜಗತ್ತಿನಲ್ಲಿ ಬಹುತೇಕರು ತಮ್ಮ ಆರೋಗ್ಯವನ್ನು ಲೆಕ್ಕಿಸದೇ ಯಶಸ್ಸು ಮತ್ತು ಹಣದ ಹಿಂದೆ ಬಿದ್ದಿದ್ದಾರೆ. 31 ವರ್ಷದ ಯುವಕನೊಬ್ಬನ ಆರೋಗ್ಯ ಸ್ಥಿತಿಯ ಬಗ್ಗೆ ಇತ್ತೀಚೆಗೆ ವೈದ್ಯರೊಬ್ಬರು ಮಾಡಿರುವ ಟ್ವೀಟ್ ಆರೋಗ್ಯ ನಿರ್ಲಕ್ಷಿಸುವವರಿಗೆ ಎಚ್ಚರಿಕೆಯ ಪಾಠವಾಗಿದೆ.
ಧೂಮಪಾನ, ಮದ್ಯಸೇವನೆ ಇಲ್ಲ
ಯುವಕನ ವೈದ್ಯಕೀಯ ಪರೀಕ್ಷೆಯ ಫಲಿತಾಂಶಗಳು ಮತ್ತು ವೈದ್ಯರ ಚೀಟಿಯು ಅಧಿಕ ರಕ್ತದೊತ್ತಡ, ಕೊಲೆಸ್ಟ್ರಾಲ್ ಮತ್ತು ಅಧಿಕ ತೂಕದಂತಹ ಗಂಭೀರ ಸಮಸ್ಯೆಗಳಿಂದ ಯುವಕ ಬಳಲುತ್ತಿರುವುದನ್ನು ತೋರಿಸುತ್ತದೆ. ಅಲ್ಲದೆ, ರಕ್ತನಾಳಗಳ ಅಡೆತಡೆಗಳು ಎಚ್ಚರಿಕೆ ಗಂಟೆಯಾಗಿದೆ. ಧೂಮಪಾನ ಮತ್ತು ಮದ್ಯಸೇವನೆ ಹೊರತಾಗಿಯೂ ಉತ್ತಮವಲ್ಲದ ಆಹಾರ ಹವ್ಯಾಸ ಮತ್ತು ಒತ್ತಡದ ತುಂಬಿದ ಉದ್ಯೋಗವು ಯುವಕನ ಆರೋಗ್ಯ ಸಮಸ್ಯೆಯನ್ನು ಉಲ್ಬಣಿಸಿದೆ. ಪ್ರಸ್ತುತ ಸಮಾಜದಲ್ಲಿ ಈ ಸನ್ನಿವೇಶವು ಸಾಮಾನ್ಯವಲ್ಲ. ಕೆಲಸ ಸಂಬಂಧಿತ ಒತ್ತಡ ಮತ್ತು ಅನಾರೋಗ್ಯಕರ ಆಹಾರ ಪದ್ಧತಿ ತುಂಬಾ ಕಳವಳಕಾರಿಯಾಗಿದೆ.
ಆರೋಗ್ಯವೇ ನಮ್ಮ ಗುರಿ
ಕಂಪನಿಯಲ್ಲಿ ಒತ್ತಡದಿಂದ ಕೆಲಸ ಮಾಡುವುದರಿಂದ ಏನು ಪ್ರಯೋಜನಾ? ಎಂದು ವೈದ್ಯರು ಪ್ರಶ್ನೆ ಮಾಡಿದ್ದಾರೆ. ಹಣದ ಹಿಂದೆ ಬೀಳುತ್ತಿರುವ ಅನೇಕರು ಒತ್ತಡದ ಕೆಲಸದಲ್ಲಿ ಮಗ್ನರಾಗಿದ್ದಾರೆ. ಇದು ಆರೋಗ್ಯಕರವಲ್ಲ. ಹಣದ ಬದಲು ಆರೋಗ್ಯ ರಕ್ಷಣೆ ನಮ್ಮ ಕರಿಯರ್ನ ಗುರಿಯಾಗಿರಬೇಕು ಎಂದು ಎಂದು ವೈದ್ಯರು ಹೇಳಿದ್ದಾರೆ.
ಆರೋಗ್ಯವೇ ನಿಜವಾದ ಸಂಪತ್ತು
ಆರೋಗ್ಯವು ನಮ್ಮ ಯೋಗಕ್ಷೇಮದ ಅಡಿಪಾಯವಾಗಿದೆ ಮತ್ತು ವಾಸ್ತವವಾಗಿ, ಪ್ರತಿಯೊಬ್ಬ ವ್ಯಕ್ತಿಯು ಹೊಂದಿರುವ ನಿಜವಾದ ಸಂಪತ್ತಾಗಿದೆ. ಅದನ್ನು ನಿರ್ಲಕ್ಷಿಸುವುದು ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು. ಇದು ವ್ಯಕ್ತಿಯ ಮೇಲೆ ಮಾತ್ರವಲ್ಲದೆ ಅವರು ಕೆಲಸ ಮಾಡುವ ಕಂಪನಿಯ ಮೇಲೂ ಪರಿಣಾಮ ಬೀರುತ್ತದೆ. ಆರೋಗ್ಯಕರ ಕಾರ್ಯಪಡೆಯು ಉತ್ಪಾದಕ ಮತ್ತು ಯಶಸ್ವಿ ಸಂಸ್ಥೆಯ ಮೂಲಾಧಾರವಾಗಿದೆ. ಹೀಗಾಗಿ ಕಂಪನಿಗಳು ಸಹ ಉದ್ಯೋಗಿಗಳ ಆರೋಗ್ಯ ಮತ್ತು ಉತ್ತಮ ಜೀವನದ ಮೌಲ್ಯವನ್ನು ಗುರುತಿಸಬೇಕಾಗಿದೆ. ಉದ್ಯೋಗಿಗಳು ಸಹ ನಿತ್ಯವೂ ಆರೋಗ್ಯ ಕಡೆ ಗಮನ ಹರಿಸಬೇಕಿದೆ. ನಿಯಮಿತ ವ್ಯಾಯಾಮ ಸೇರಿದಂತೆ ಹಲವು ಚಟುವಟಿಕೆಗಳೊಂದಿಗೆ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಿದೆ ಎಂದು ವೈದ್ಯರು ಸಲಹೆ ನೀಡಿದ್ದಾರೆ.
ವೈದ್ಯರು ಶೇರ್ ಮಾಡಿರುವ ವೈದ್ಯಕೀಯ ಪರೀಕ್ಷೆಯ ಫಲಿತಾಂಶಗಳು ಮತ್ತು ವೈದ್ಯರ ಚೀಟಿಯು ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕ ನೆಟ್ಟಿಗರು ಕಳವಳ ವ್ಯಕ್ತಪಡಿಸಿದ್ದಾರೆ. ಹಣಕ್ಕಿಂತ ಆರೋಗ್ಯವೇ ಮುಖ್ಯ. ಆರೋಗ್ಯ ಇದ್ದರೆ ಮಾತ್ರ ಎಲ್ಲವನ್ನು ಅನುಭವಿಸಲು ಸಾಧ್ಯ. ಹೀಗಾಗಿ ಆರೋಗ್ಯದ ಬಗ್ಗೆ ಗಮನ ಹರಿಸುವಂತೆ ಕಾಮೆಂಟ್ ಮೂಲಕ ಸಲಹೆಗಳನ್ನು ನೀಡುತ್ತಿದ್ದಾರೆ. (