ಬದಿಯಡ್ಕ: ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ತೃತೀಯ ಚಾತುರ್ಮಾಸ್ಯ ವ್ರತಾಚರಣೆಯ 60ನೇ ದಿನ ಆಗಸ್ಟ್ 31ರಂದು ಗುರುವಾರ ಮಾನ್ಯ ವಲಯ ಸಮಿತಿಯ ವತಿಯಿಂದ ಒಂದು ದಿನದ ಪೂರ್ಣ ಸೇವೆ ನಡೆಯಲಿರುವುದು. ಅಂದು ಬೆಳಗ್ಗೆ 8 ರಿಂದ ಮಾನ್ಯ ಶ್ರೀ ಅಯ್ಯಪ್ಪ ಭಜನಾ ಸಂಘ, ಮಹಾವಿಷ್ಣು ಮಹಿಳಾ ಭಜನಾ ಸಂಘ ಕಾರ್ಮಾರು, ಶ್ರೀ ಶಾಸ್ತಾ ಮಹಿಳಾ ಭಜನಾ ಸಂಘ ಮಾನ್ಯ, ಶ್ರೀ ಮಹಾವಿಷ್ಣು ಭಜನಾ ಸಂಘ ಕಾರ್ಮಾರು ಇವರಿಂದ ಭಜನೆ, 11 ರಿಂದ ವೃಂದಾವನ ಕುಣಿತ ಭಜನಾ ಸಂಘ ಮಾನ್ಯ ಹಾಗೂ ತತ್ವಮಸಿ ಕುಣಿತ ಭÀಜನಾ ಸಂಘ ಚುಕ್ಕಿನಡ್ಕ ಇವರಿಂದ ಕುಣಿತ ಭಜನೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ ಅನ್ನಪ್ರಸಾದ. ಅಪರಾಹ್ನ 1.30ರಿಂದ ಕು. ಅನಘ ಕೆ.ರಾಮನ್ ಕಾರ್ಮಾರು ಮತ್ತು ಶಮಾ ವಳಕುಂಜ ಇವರಿಂದ ಭರತ ನೃತ್ಯ ವೈಭÀವ, ಸಂಜೆ 3.30ರಿಂದ ಶ್ರೀ ಗುರುಗಳಿಂದ ಅನುಗ್ರಹ ಮಂತ್ರಾಕ್ಷತೆ, ಸಂಜೆ 4 ರಿಂದ ವಿದುಷಿ ವಾಣಿಪ್ರಸಾದ ಕಬೆಕ್ಕೋಡು ಇವರ ಸುನಾದ ಸಂಗೀತ ಕಲಾಶಾಲೆ ಬದಿಯಡ್ಕ ಅರ್ಪಿಸುವ ಸುನಾದ ಯುವಭಾರತಿ, ಸಂಜೆ 6.30ರಿಂದ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಬಯಲಾಟ ವಾಲಿಮೋಕ್ಷ ಅಗ್ರಪೂಜೆ ನಡೆಯಲಿದೆ. ಹಿಮ್ಮೇಳದಲ್ಲಿ ದಿನೇಶ ಅಮ್ಮಣ್ಣಾಯ, ಪಟ್ಲ ಸತೀಶ ಶೆಟ್ಟಿ, ರವಿಚಂದ್ರ ಕನ್ನಡಿಕಟ್ಟೆ, ದೇಲಂತಮಜಲು ಸುಬ್ರಹ್ಮಣ್ಯ ಭಟ್, ಚೈತನ್ಯಕೃಷ್ಣ ಪದ್ಯಾಣ, ಲವಕುಮಾರ ಐಲ ಪಾಲ್ಗೊಳ್ಳಲಿದ್ದಾರೆ. ಮುಮ್ಮೇಳದಲ್ಲಿ ಹೆಸರಾಂತ ಕಲಾವಿದರು ವಿವಿಧ ಪಾತ್ರಗಳಲ್ಲಿ ರಂಜಿಸಲಿದ್ದಾರೆ.