ಪಾಲಕ್ಕಾಡ್: ದೇಶದ ಹೆಮ್ಮೆಯ ಮಿಷನ್ ಚಂದ್ರಯಾನ-3 ರ ಯಶಸ್ಸಿನ ಸಂಭ್ರಮಾಚರಣೆಗೆ ಫೆಡರಲ್ ಬ್ಯಾಂಕ್ ಒಲವಕೋಡ್ ಶಾಖೆಯ ಸದಸ್ಯರು ವಿಶಿಷ್ಟ ರಂಗೋಲಿ ಮೂಲಕ ಗಮನ ಸೆಳೆದಿದ್ದಾರೆ.
ಹೂವಿನ ರಂಗೋಲಿ ಮಧ್ಯದಲ್ಲಿ ಚಂದ್ರಯಾನದ ಮಾದರಿಯನ್ನು ಜೋಡಿಸಲಾಗಿದೆ. ಇದರ ಮುಂದೆ ಮಲ್ಲಿಗೆ ಹೂ ಮತ್ತು ಪಾಲಕ್ ಎಲೆಗಳಿಂದ ತುಂಬಿದ ಕ್ಯೂಆರ್ ಕೋಡ್ ಇದೆ. ಈ ಕೋಡ್ ಅನ್ನು ಸ್ಕ್ಯಾನ್ ಮಾಡಿದಾಗ, ಇಸ್ರೋ ವೆಬ್‍ಸೈಟ್ ತೆರೆಯುತ್ತದೆ.
ಒಂಬತ್ತು ಸಹೋದ್ಯೋಗಿಗಳು ಓಣಂ ಮತ್ತು ಚಂದ್ರಯಾನ-3 ರ ಯಶಸ್ಸನ್ನು ಒಟ್ಟಿಗೆ ಆಚರಿಸಲು ಶಾಖೆಯ ವ್ಯವಸ್ಥಾಪಕ ವಿ ಮಹೇಶ್ ಅವರ ಕಲ್ಪನೆಯನ್ನು ತೆಗೆದುಕೊಂಡರು. ಇದಾದ ಬಳಿಕ 13 ತಾಸುಗಳ ಶ್ರಮದ ನಂತರ ಹೂವಿನ ರಂಗೋಲಿ(ಪೂಕಳಂ)ಪೂರ್ಣಗೊಂಡಿತು. ಅಕ್ಕಿ ಪುಡಿ ಮತ್ತು ಚಹಾ ಹುಡಿಯಿಂದಲೂ ಕ್ಯೂಆರ್ ಕೋಡ್‍ಗಳನ್ನು ಸಿದ್ಧಪಡಿಸಿದವರು ಇದ್ದಾರೆ, ಆದರೆ ಹೂವುಗಳಿಂದ ತಯಾರಿಸಿರುವುದು ಇದೇ ಮೊದಲು. ಸ್ವತಃ ಪ್ರಬಂಧಕರೇ ಈ ಸವಾಲನ್ನು ಸ್ವೀಕರಿಸಿ ಪೂರ್ಣಗೊಳಿಸಿದರು. ಗ್ರಿಡ್‍ಗಳನ್ನು ಬಿಡಿಸಿ, ತಪ್ಪುಗಳನ್ನು ಅಳಿಸಿ, ಆಗಾಗ ಪೋನ್‍ನಲ್ಲಿ ಸ್ಕ್ಯಾನ್ ಮಾಡುವ ಮೂಲಕ, ಹಿಂದಿನ ರಾತ್ರಿ 4 ಗಂಟೆಗೆ ಪ್ರಾರಂಭವಾದ ಡಿಜಿಟಲ್ ಹೂವಿನ ರಂಗೋಲಿ ಬೆಳಿಗ್ಗೆ 5 ಗಂಟೆಗೆ ಪೂರ್ಣಗೊಂಡಿತು.
ಶಾಖಾ ವ್ಯವಸ್ಥಾಪಕ ಮಹೇಶ್ ಮಾತನಾಡಿ, ಚಂದ್ರಯಾನ-3 ಭಾರತದ ವಿಜ್ಞಾನ ಯೋಜನೆಯಾಗಿದ್ದು, ಹೂವುಗಳನ್ನು ಬಳಸಿ ಇಸ್ರೋದ ಕ್ಯೂಆರ್ ಕೋಡ್ ತಯಾರಿಸುವುದು ವಿಶಿಷ್ಟವಾದುದು ಎಂದಿರುವರು. ಶಬರೀಶ್, ಹರಿ, ಸೂರಜ್, ವಿಷ್ಣು, ಶಿವ, ಶ್ರೀಜಿತ್, ಅಜಿತ್, ಶಬರಿ ಮತ್ತು ವೈಶಾಖ್ ಸಿದ್ಧಪಡಿಸಲು ಜೊತೆಯಲ್ಲಿದ್ದವರು.