ನವದೆಹಲಿ: ಭಾರತೀಯ ರೈಲ್ವೇ (India Railway) ಯ ಸತತ ಪ್ರಯತ್ನಗಳ ಹೊರತಾಗಿಯೂ ಕಳೆದ ನಾಲ್ಕು ವರ್ಷಗಳಲ್ಲಿ ಇಲಾಖೆಯ ಸಾಲದ ಹೊರೆ ಹೆಚ್ಚಾಗಿದೆ. 2019-20ರ ಆರ್ಥಿಕ ವರ್ಷದಲ್ಲಿ ಭಾರತೀಯ ರೈಲ್ವೆ ಇಲಾಖೆಯ ಸಾಲದ ಹೊರೆ 20,304 ಕೋಟಿ ರೂಪಾಯಿಗಳಿದ್ದರೆ 2020-21ರಲ್ಲಿ 23,386 ಕೋಟಿ ರೂಪಾಯಿಗಳಾದವು.
ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಸಂಸತ್ತಿನಲ್ಲಿ ಹಂಚಿಕೊಂಡ ಅಂಕಿಅಂಶಗಳ ಪ್ರಕಾರ, ಸಾಲವು 2020-21 ರಲ್ಲಿ 23,386 ಕೋಟಿ ರೂಪಾಯಿಗಳಿಂದ 2021-22 ರಲ್ಲಿ 28,702 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ಇದು 5,316 ಕೋಟಿ ರೂಪಾಯಿಗಳಷ್ಟು ತೀವ್ರ ಹೆಚ್ಚಳವನ್ನು ಕಂಡಿದೆ.
2019-20 ರಿಂದ 2020-21 ರವರೆಗಿನ ಸಾಲದ ಅಂಚು 2020-21 ರಲ್ಲಿ 3,086 ಕೋಟಿ ರೂಪಾಯಿಗಳಿಂದ 2021-22 ರಲ್ಲಿ 5,316 ಕೋಟಿ ರೂಪಾಯಿಗಳ ಮಟ್ಟಕ್ಕೆ ಮುಂದುವರೆಯಿತು. ರೋಲಿಂಗ್ ಸ್ಟಾಕ್ ಆಸ್ತಿಗಳ ಸ್ವಾಧೀನ ಮತ್ತು ಇತರ ಯೋಜನೆಗಳ ನಿರ್ಮಾಣಕ್ಕೆ ಹಣಕಾಸು ಒದಗಿಸುವುದಕ್ಕಾಗಿ ರೈಲ್ವೇ ಸಚಿವಾಲಯದ ಅಡಿಯಲ್ಲಿ ಸಾರ್ವಜನಿಕ ವಲಯದ ಉದ್ಯಮವಾಗಿರುವ ಇಂಡಿಯನ್ ರೈಲ್ವೇ ಫೈನಾನ್ಸ್ ಕಾರ್ಪೊರೇಷನ್ ಮೂಲಕ ಹೆಚ್ಚುವರಿ ಬಜೆಟ್ ಸಂಪನ್ಮೂಲಗಳನ್ನು ರೈಲ್ವೇಸ್ ಸಂಗ್ರಹಿಸಿದೆ. ದೊಡ್ಡ ಯೋಜನೆಗಳೇ ಸಾಲದ ಹೆಚ್ಚಳಕ್ಕೆ ಕಾರಣ ಎನ್ನುತ್ತಾರೆ ರೈಲ್ವೆ ಅಧಿಕಾರಿಗಳು.
ಅದೇ ರೀತಿಯಲ್ಲಿ, ಸೇವೆಗಳು ಮತ್ತು ಸೇವೆಯೇತರ ಸಂಪನ್ಮೂಲಗಳ ಮೂಲಕ ಆದಾಯವನ್ನು ಹೆಚ್ಚಿಸುವ ಎಲ್ಲಾ ಪ್ರಯತ್ನಗಳ ಹೊರತಾಗಿಯೂ, ರೈಲ್ವೆಯ ಸಾಲವು 2022-23 ರಲ್ಲಿ 34,189 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಇದು 9,487 ಕೋಟಿ ರೂಪಾಯಿಗಳಷ್ಟು ಹೆಚ್ಚಾಗಿದೆ.
ನಾವು ಬಹಳಷ್ಟು ಬೃಹತ್ ಯೋಜನೆಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಸಾಲವನ್ನು ಕಡಿಮೆ ಮಾಡಲು ರೈಲ್ವೆ ತನ್ನ ಆಂತರಿಕ ಸೇವೆಗಳು ಮತ್ತು ಸಂಪನ್ಮೂಲಗಳಿಂದ ಆದಾಯವನ್ನು ಹೆಚ್ಚಿಸಲು ವಿವಿಧ ಮಾರ್ಗಗಳನ್ನು ಅನ್ವೇಷಿಸುತ್ತಿದೆ ಎಂದು ಹಿರಿಯ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
2020-21ರಲ್ಲಿ ಕೋವಿಡ್ ನಿಂದಾಗಿ ರೈಲುಗಳ ಓಡಾಟ ಸ್ಥಗಿತವಾಗಿ ಉಂಟಾದ ನಷ್ಟಕ್ಕೆ ಹಣಕಾಸು ಸಚಿವಾಲಯವು 79, 398 ಕೋಟಿ ರೂಪಾಯಿಗಳ ವಿಶೇಷ ಸಾಲವನ್ನು ಒದಗಿಸಿದೆ, ಸಾಲ ಸಚಿವಾಲಯಕ್ಕೆ ಈ ವಿಶೇಷ ಸಾಲದ ಮರುಪಾವತಿಯು ಮುಂದಿನ ಆರ್ಥಿಕ ವರ್ಷ 2024-25 ರ ಹಣಕಾಸು ವರ್ಷದಿಂದ ಪ್ರಾರಂಭವಾಗಲಿದೆ ಎಂದು ರೈಲ್ವೆ ಹೇಳಿಕೊಂಡಿದೆ.
3.99 ಲಕ್ಷ ಕೋಟಿ ರೂಪಾಯಿಗಳಲ್ಲಿ 20,659 ಕಿಲೋಮೀಟರ್‌ಗಳನ್ನು ಒಳಗೊಂಡ 189 ಹೊಸ ಮಾರ್ಗ ಯೋಜನೆಗಳು ಪೈಪ್‌ಲೈನ್‌ನಲ್ಲಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಇವುಗಳು ಏಪ್ರಿಲ್ 1 ರಂತೆ ಯೋಜನೆ, ಮಂಜೂರಾತಿ ಮತ್ತು ನಿರ್ಮಾಣ ಹಂತದಲ್ಲಿವೆ.
ನಾವು ಸಾಲದ ಹೊರೆಯಲ್ಲಿದ್ದೇವೆ, ಆದರೆ 20,659 ಕಿಲೋಮೀಟರ್‌ಗಳ ಹೊಸ ಮಾರ್ಗಗಳಲ್ಲಿ, 2,903 ಕಿಲೋಮೀಟರ್‌ಗಳಲ್ಲಿ ಆದಾಯ ಕಂಡಿದೆ, ಇದು ರೈಲ್ವೆಯ ಖರ್ಚು ಅಥವಾ ಅದರ 'ಲಾಭ'ಕ್ಕಿಂತ ಹೆಚ್ಚಿನ ಆದಾಯವಾಗಿದೆ. ಹಣಕಾಸು ವರ್ಷ 2021-22 ರಲ್ಲಿ ಈ ವರ್ಷದ ಮಾರ್ಚ್ 23 ರವರೆಗೆ 1.37 ಲಕ್ಷ ಕೋಟಿ ವೆಚ್ಚದಲ್ಲಿ ಕಾರ್ಯಾರಂಭ ಮಾಡಿದೆ ಎಂದು ಹಿರಿಯ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ವರ್ಷದ ಆರಂಭದಲ್ಲಿ, ರೈಲ್ವೆಯ ಸಂಸದೀಯ ಸ್ಥಾಯಿ ಸಮಿತಿಯು ರೈಲ್ವೆಯ ನಿವ್ವಳ ಆದಾಯದಲ್ಲಿ ತೀವ್ರ ಕುಸಿತದ ಬಗ್ಗೆ ಕಳವಳ ವ್ಯಕ್ತಪಡಿಸಿದೆ.