ಹರಿಯಾಣ: ಹರಿಯಾಣದ ಜನಪ್ರಿಯ ಗಾಯಕ ರಾಜು ಪಂಜಾಬಿ ಹಿಸಾರ್‌ನ ಖಾಸಗಿ ಆಸ್ಪತ್ರೆಯಲ್ಲಿ 40ನೇ ವಯಸ್ಸಿನಲ್ಲಿ ನಿಧನರಾದರು.
ಕಳೆದ ಹಲವು ದಿನಗಳಿಂದ ಆಸ್ಪತ್ರೆಯಲ್ಲಿ ಜಾಂಡೀಸ್‌ಗೆ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಯ ಸಮಯದಲ್ಲಿ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದ್ದರಿಂದ ಡಿಸ್ಚಾರ್ಜ್ ಮಾಡಲಾಗಿತ್ತು. ಆದರೆ ನಂತರ ಪರಿಸ್ಥಿತಿ ಹದಗೆಟ್ಟಿದ್ದರಿಂದ ಅವರನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಲಾಯಿತು. ಗಾಯಕನ ಅಂತಿಮ ವಿಧಿವಿಧಾನಗಳನ್ನು ಅವರ ಸ್ಥಳೀಯ ಗ್ರಾಮವಾದ ರಾಜಸ್ಥಾನದ ರಾವತ್ಸರ್‌ನಲ್ಲಿ ನಡೆಸಲಾಗುತ್ತದೆ.
ರಾಜು ಪಂಜಾಬಿ ನಿಧನಕ್ಕೆ ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಇದು ಹರಿಯಾಣ ಸಂಗೀತ ಉದ್ಯಮಕ್ಕೆ 'ಭರಿಸಲಾಗದ ನಷ್ಟ' ಎಂದು ಹೇಳಿದರು. ದೇವರು ಅವರ ಪವಿತ್ರ ಪಾದದಲ್ಲಿ ಗಾಯಕನ ಆತ್ಮಕ್ಕೆ ಸ್ಥಾನ ನೀಡಲಿ ಮತ್ತು ಅವರ ಕುಟುಂಬ ಸದಸ್ಯರಿಗೆ ಈ ಅಪಾರ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಟ್ವೀಟ್ ಮಾಡಿದ್ದಾರೆ.
ಗಾಯಕ ಹರ್ಯಾನ್ವಿ ಸಂಗೀತ ಉದ್ಯಮದಲ್ಲಿ 'ದೇಸಿ ದೇಸಿ', 'ಅಚಾ ಲಗೇ ಸೆ', 'ತು ಚೀಜ್ ಲಜ್ವಾಬ್', 'ಭಾಂಗ್ ಮೇರೆ ಯಾರಾ ನೆ', 'ಲಾಸ್ಟ್ ಪೆಗ್' ಮುಂತಾದ ಹಾಡುಗಳಿಗೆ ಹೆಸರುವಾಸಿಯಾಗಿದ್ದರು. ಅಲ್ಲದೆ ಅವರು ಜನಪ್ರಿಯ ಗಾಯಕಿ ಸಪ್ನಾ ಚೌಧರಿ ಅವರೊಂದಿಗೆ ಕೆಲಸ ಮಾಡಿದರು. ಅವರ ಸಾವಿನಿಂದ ಚಿತ್ರರಂಗ ಆಘಾತಕ್ಕೊಳಗಾಗಿದೆ.