ನವದೆಹಲಿ: ಶೀಘ್ರದಲ್ಲೇ ಬ್ಯಾಂಕ್ ನೌಕರರಿಗೆ ಪ್ರತಿ ಶನಿವಾರ ರಜೆಯನ್ನು ನೀಡುವ ಮೂಲಕ ವಾರದಲ್ಲಿ ಕೇವಲ 5 ದಿನಗಳು ಮಾತ್ರ ಕೆಲಸ ಮಾಡುವ ಪ್ರಸ್ತಾವಕ್ಕೆ ಇಂಡಿಯನ್ ಬ್ಯಾಂಕರ್ಸ್ ಅಸೋಸಿಯೇಷನ್ ಒಪ್ಪಿಗೆ ಸೂಚಿಸಿದ್ದು, ಈ ಕುರಿತು ಶಿಫಾರಸ್ಸನ್ನು ಕೇಂದ್ರ ಹಣಕಾಸು ಸಚಿವಾಲಯಕ್ಕೆ ಕಳುಹಿಸಿದೆ ಎಂದು ಇತ್ತೀಚಿನ ವರದಿಯೊಂದು ಮಾಹಿತಿ ನೀಡಿದೆ.
ತಿಂಗಳಿಗೆ ಎರಡು ಬಾರಿ ಆರು ದಿನಗಳ ಕಾಲ ಕಾರ್ಯನಿರ್ವಹಿಸುವ ಎಲ್ಲಾ ಭಾರತೀಯ ಬ್ಯಾಂಕ್‌ಗಳು ಶೀಘ್ರದಲ್ಲೇ ಎಲ್ಲಾ ವಾರಾಂತ್ಯಗಳಲ್ಲಿ ರಜಾ ದಿನಗಳನ್ನು ಪಡೆಯುತ್ತವೆ ಎಂದು ಮೂಲಗಳು ತಿಳಿಸಿವೆ. ಎಲ್ಲಾ ಶನಿವಾರಗಳನ್ನು ಬ್ಯಾಂಕ್ ರಜೆ ಎಂದು ಘೋಷಿಸಲು ಬ್ಯಾಂಕ್ ಉದ್ಯೋಗಿಗಳ ಒಕ್ಕೂಟಗಳು ಮುಂದಿಟ್ಟಿರುವ ಬೇಡಿಕೆಯನ್ನು ಜುಲೈ 28 ರಂದು ಇಂಡಿಯಾಸ್ ಬ್ಯಾಂಕ್ ಅಸೋಸಿಯೇಷನ್ ಸಭೆಯಲ್ಲಿ ಅಂಗೀಕರಿಸಿದೆ.
ಕೇಂದ್ರ ಹಣಕಾಸು ಸಚಿವಾಲಯವೂ ಇದನ್ನು ಅನುಮೋದಿಸಿದರೆ ಬ್ಯಾಂಕ್‌ಗಳು ವಾರದಲ್ಲಿ ಐದು ದಿನ ಮಾತ್ರ ಕಾರ್ಯನಿರ್ವಹಿಸಲಿವೆ ಮತ್ತು ನೌಕರರು ವಾರದ ಪ್ರಥಮ ಮತ್ತು 3ನೇ ಶನಿವಾರ ಕೆಲಸ ಮಾಡುವ ಅಗತ್ಯವಿರುವುದಿಲ್ಲ ಎಂದು ವರದಿ ತಿಳಿಸಿದೆ,