HEALTH TIPS

ಗಾಲ್ವಾನ್ ಘರ್ಷಣೆ ನಂತರ ಲಡಾಖ್‌ಗೆ 68000 ಸೈನಿಕರನ್ನು ಏರ್‌ಲಿಫ್ಟ್ ಮಾಡಿದ್ದ IAF!

             ವದೆಹಲಿ: ಗಾಲ್ವಾನ್ ಕಣಿವೆಯಲ್ಲಿ ಚೀನಿ ಸೈನಿಕರೊಂದಿಗಿನ ಘರ್ಷಣೆಯ ನಂತರ ಭಾರತೀಯ ವಾಯು ಪಡೆಯು (ಐಎಎಫ್‌) 68,000ಕ್ಕೂ ಹೆಚ್ಚು ಸೈನಿಕರು, ಸುಮಾರು 90 ಟ್ಯಾಂಕ್‌ಗಳು ಮತ್ತು ಇತರ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಪೂರ್ವ ಲಡಾಖ್‌ಗೆ ಅತ್ಯಂತ ಕ್ಷಿಪ್ರಗತಿಯಲ್ಲಿ ಏರ್‌ಲಿಫ್ಟ್‌ ಮಾಡಿತ್ತು ಎಂದು ರಕ್ಷಣಾ ಮತ್ತು ಭದ್ರತಾ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.

            2020ರ ಜೂನ್‌ 15ರಂದು ಸೈನಿಕರ ನಡುವೆ ಗಾಲ್ವಾನ್‌ ಕಣಿವೆಯಲ್ಲಿ ಸಂಘರ್ಷ ನಡೆದಿತ್ತು. ಇದರಿಂದಾಗಿ ಶತ್ರು ಸೈನಿಕರ ನೆಲೆಗಳ ಮೇಲೆ ನಿರಂತರ ಕಣ್ಗಾವಲು ಮತ್ತು ಬೇಹುಗಾರಿಕೆಗಾಗಿ ಐಎಎಫ್‌ ತನ್ನ ಸುಖೋಯ್‌-30 ಎಂಕೆಐ ಮತ್ತು ಜಾಗ್ವಾರ್ ಜೆಟ್‌ಗಳನ್ನು ಈ ಪ್ರದೇಶದಲ್ಲಿ ತ್ವರಿತವಾಗಿ ನಿಯೋಜಿಸಿತು. ಇವುಗಳ ಕಣ್ಗಾವಲು ವ್ಯಾಪ್ತಿಯು ಸುಮಾರು 50 ಕಿ.ಮೀ.ವರೆಗೂ ಇತ್ತು. ಚೀನಾ ಸೈನಿಕರ ನೆಲೆಗಳು ಮತ್ತು ಚಲನವಲನಗಳ ಮೇಲೆ ನಿಖರವಾಗಿ ಕಣ್ಗಾವಲಿಡಲಾಗಿತ್ತು. ರಫೇಲ್ ಮತ್ತು ಮಿಗ್ -29 ವಿಮಾನಗಳನ್ನು ಒಳಗೊಂಡಂತೆ ಹಲವು ಯುದ್ಧ ವಿಮಾನಗಳ ಹಲವಾರು ಸ್ಕ್ವಾಡ್ರನ್‌ಗಳನ್ನು ವಾಯು ಗಸ್ತು ನಡೆಸಲು ನಿಯೋಜಿಸಲಾಗಿತ್ತು ಎಂದು ಮೂಲಗಳು ಹೇಳಿವೆ.

ವಿಶೇಷ ಕಾರ್ಯಾಚರಣೆಯಡಿ ಪೂರ್ವ ಲಡಾಖ್‌ನ ಎಲ್‌ಎಸಿಯ ಉದ್ದಕ್ಕೂ ತ್ವರಿತ ನಿಯೋಜನೆಗಾಗಿ ಸೇನಾ ಪಡೆಗಳು ಮತ್ತು ಶಸ್ತ್ರಾಸ್ತ್ರಗಳನ್ನು ಐಎಎಫ್‌ನ ಸರಕು ಸಾಗಣೆ ವಿಮಾನಗಳಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ಸಾಗಿಸಲಾಯಿತು. ಸೇನಾ ಯೋಧರು, ಯುದ್ಧ ಟ್ಯಾಂಕ್‌ಗಳ ಜತೆಗೆ ಸುಮಾರು 330 ಬಿಎಂಪಿ ಪದಾತಿ ದಳದ ಯುದ್ಧ ವಾಹನಗಳು, ರಾಡಾರ್ ವ್ಯವಸ್ಥೆಗಳು, ಫಿರಂಗಿ ಬಂದೂಕುಗಳು ಮತ್ತು ಇತರ ಹಲವು ಉಪಕರಣಗಳನ್ನು ವಾಯುಪಡೆ ವಿಮಾನಗಳಲ್ಲಿ ಸಾಗಿಸಲಾಗಿತ್ತು. ಅಲ್ಲದೆ, ವಾಯುಪಡೆಯ ವಿವಿಧ ಹೆಲಿಕಾಪ್ಟರ್‌ಗಳನ್ನು ಮದ್ದುಗುಂಡುಗಳು ಮತ್ತು ಸೇನಾ ಉಪಕರಣಗಳ ಬಿಡಿಭಾಗಗಳನ್ನು ಪರ್ವತದ ಸೇನಾ ನೆಲೆಗಳಿಗೆ ಸಾಗಿಸಲು ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿತ್ತು. ಇದು ಹಲವು ವರ್ಷಗಳಿಂದ ಸೇನಾ ಪಡೆಯ ಕಾರ್ಯತಂತ್ರದ ಏರ್‌ಲಿಫ್ಟ್ ಸಾಮರ್ಥ್ಯವು ಯಾವ ರೀತಿ ಬಲಗೊಂಡಿದೆ ಎನ್ನುವುದನ್ನು ಎತ್ತಿ ತೋರಿಸಿತು ಎಂದು ಮೂಲಗಳು ಹೇಳಿವೆ.

               ಪೂರ್ವ ಲಡಾಖ್‌ ಪ್ರದೇಶದ ಎಲ್‌ಎಸಿ ಉದ್ದಕ್ಕೂ ಮುಂಚೂಣಿ ನೆಲೆಗಳಿಗೆ ಮೇಲ್ಮೈ ವಾಯು ನಿರ್ದೇಶಿತ ಶಸ್ತ್ರಾಸ್ತ್ರಗಳು, ವಿವಿಧ ರಾಡಾರ್‌ಗಳನ್ನು ಸ್ಥಾಪಿಸುವ ಮೂಲಕ ಐಎಎಫ್ ತನ್ನ ವಾಯು ರಕ್ಷಣಾ ಸಾಮರ್ಥ್ಯಗಳು ಮತ್ತು ಯುದ್ಧ ಸನ್ನದ್ಧತೆಯನ್ನು ತ್ವರಿತವಾಗಿ ಹೆಚ್ಚಿಸಿಕೊಂಡಿತ್ತು. ವಾಯುಪಡೆಯ ವಿವಿಧ ವಿಭಾಗಗಳು ಅತ್ಯಂತ ಕಷ್ಟಕರ ಸಂದರ್ಭಗಳಲ್ಲಿ ಕಾರ್ಯನಿರ್ವಹಿಸಿದವು ಮತ್ತು ತಮ್ಮ ಎಲ್ಲಾ ಮಿಷನ್ ಗುರಿಗಳನ್ನು ಸಾಧಿಸಿದ್ದವು ಎಂದು ಮೂಲಗಳು ತಿಳಿಸಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries