ನವದೆಹಲಿ: ಭಾರತದ ಸ್ಮಾರ್ಟ್ ಫೋನ್ ಮಾರುಕಟ್ಟೆ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಶೇ.6 ರಷ್ಟು ಕುಸಿತ ಕಂಡಿದೆ. 2023 ರ 2 ನೇ ತ್ರೈಮಾಸಿಕದಲ್ಲಿ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, ಭಾರತದ ಒಟ್ಟಾರೆ ಮೊಬೈಲ್ ಮಾರುಕಟ್ಟೆ ಶೇ.2 ರಷ್ಟು ಕುಸಿತ ಕಂಡಿದೆ.
ಸೈಬರ್ ಮೀಡಿಯಾ ರಿಸರ್ಚ್ ( ಸಿಎಂಆರ್) ಈ ಬಗ್ಗೆ ವರದಿ ಪ್ರಕಟಿಸಿದೆ. 5 ಜಿ ಸ್ಮಾರ್ಟ್ ಫೋನ್ ಮಾರಾಟದ ಪಾಲು ಶೇ.47 ರಷ್ಟು ಏರಿಕೆ ಕಂಡಿದ್ದರೆ, ವರ್ಷದಿಂದ ವರ್ಷಕ್ಕೆ 5ಜಿ ಸ್ಮಾರ್ಟ್ ಫೋನ್ ಮಾರಾಟ ಶೇ.45 ರಷ್ಟು ಏರಿಕೆಯಾಗುತ್ತಿದೆ. ಭಾರತದ 5 ಜಿ ಮಾರುಕಟ್ಟೆಯಲ್ಲಿ ಸ್ಯಾಮ್ ಸಂಗ್ ಮೊಬೈಲ್ ಪ್ರಾಬಲ್ಯ ಸಾಧಿಸಿದ್ದು, ಶೇ.24 ರಷ್ಟು ಮಾರುಕಟ್ಟೆಯನ್ನು ಆವರಿಸಿದೆ. ಈ ನಂತರದ ಸ್ಥಾನದಲ್ಲಿ ಚೀನಾದ ಮೊಬೈಲ್ ಸಂಸ್ಥೆಗಳಾದ ಒನ್ ಪ್ಲಸ್ ಇದ್ದು ಶೇ.20 ರಷ್ಟು ಮಾರುಕಟ್ಟೆಯನ್ನು ಆವರಿಸಿದೆ.
ಗ್ರಾಹಕ ಬೇಡಿಕೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತಿರುವ ಸುಧಾರಿತ ಮ್ಯಾಕ್ರೋ ಎಕಾನಾಮಿಕ್ ಪರಿಸ್ಥಿತಿ, ಹಾಗೂ ಮುಂಬರುವ ಹಬ್ಬದ ಸಾಲುಗಳಲ್ಲಿ ಸರಕುಗಳನ್ನು ಇತ್ಯರ್ಥಗೊಳಿಸುವ ಒಇಎಂ ಗಳ ಕಾರ್ಯತಂತ್ರಗಳ ಭಾಗವಾಗಿ ಈ ಕುಸಿತ ಕಂಡಿದೆ. ಸ್ಮಾರ್ಟ್ ಫೋನ್ ಗಳ ಮಾರಾಟದಲ್ಲಿ ಒಟ್ಟಾರೆ ಕುಸಿತ ದಾಖಲಾದರೂ 5ಜಿ ಸ್ಮಾರ್ಟ್ ಫೋನ್ ವಿಭಾಗದಲ್ಲಿ ಶೇ.47 ರಷ್ಟು ಏರಿಕೆ ಕಂಡಿರುವುದು ವಿಶ್ವಾಸ ಮೂಡಿಸುತ್ತದೆ. ಇದು 2022 ರ ಕ್ಯು2 ನಲ್ಲಿ ಶೇ.31 ರಷ್ಟಿತ್ತು. ಒಟ್ಟಾರೆ ಸ್ಮಾರ್ಟ್ ಫೋನ್ ವಿಭಾಗದಲ್ಲಿ ಶೇ.9 ರಷ್ಟು ಬೆಳವಣಿಗೆ ದಾಖಲಾಗಿದೆ ಎಂದು ಸೈಬರ್ ಮೀಡಿಯಾ ರಿಸರ್ಚ್ ಸಿಎಂಆರ್ ನ ಇಂಡಸ್ಟ್ರಿ ಇಂಟೆಲಿಜೆನ್ಸ್ ಗ್ರೂಪ್ ನ ವಿಶ್ಲೇಷಕರಾದ ಶಿಪ್ರಾ ಸಿನ್ಹಾ ಹೇಳಿದ್ದಾರೆ.