ಬದಿಯಡ್ಕ: ಬದಿಯಡ್ಕ ಮಂಡಲ ಕಾಂಗ್ರೆಸ್ ಕಚೇರಿಯಲ್ಲಿ 76ನೇ ಸ್ವಾತಂತ್ರ್ಯೋತ್ಸವ ಆಚರಣೆಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಪಿಜಿ ಚಂದ್ರಹಾಸ ರೈ ಧ್ವಜಾರೋಹಣಗೈದರು. ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬದಿಯಡ್ಕ ಮಂಡಲ ಕಾಂಗ್ರೆಸ್ ಅಧ್ಯಕ್ಷ ನಾರಾಯಣ ಎಂ ವಹಿಸಿದ್ದರು. ಮಂಡಲ ಉಪಾಧ್ಯಕ್ಷರಾದ ಪಿ.ಜಿ. ಜಗನ್ನಾಥ ರೈ, ಕುಂಜಾರ್ ಮೊಹಮ್ಮದ್, ಕಾರ್ಯದರ್ಶಿ ಚಂದ್ರಹಾಸ ಮಾಸ್ತರ್ ಮಾತನಾಡಿದರು. ಶಾಫಿ ಗೊಳಿಯಡ್ಕ, ಶಾಫಿ ಗೋಳಿಯಡಿ, ಶಾಫಿ ಪಯ್ಯಲಡ್ಕ, ಶ್ರೀನಾಥ, ಜಯಪ್ರಕಾಶ್, ಮಾಥ್ಯ್ಯೂ ಬದಿಯಡ್ಕ, ಮೊದಲಾದವರು ಉಪಸ್ಥಿತರಿದ್ದರು.