ಪೆರ್ಲ: ಪಡ್ರೆ ಜಿಎಚ್.ಎಸ್.ಎಸ್. ಶಾಲೆಯಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ದೇಶಭಕ್ತಿಯ ಉತ್ಸಾಹ, ಧ್ವಜಾರೋಹಣ, ಅತಿಥಿಗಳ ಭಾಷಣ, ಪ್ರತಿಭಾ ಪುರಸ್ಕಾರಗಳ ವಿತರಣೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳಿಂದ ತುಂಬಿದ ಮಹತ್ವದ ಸಂದರ್ಭವಾಗಿತ್ತು.
ಭಾರತದ ಪ್ರಗತಿ ಹಾಗೂ ಯೋಗ ಕ್ಷೇಮಕ್ಕೆ ಕೊಡುಗೆ ನೀಡುವ ಮೂಲಕ ನಮ್ಮ ವೀರರ ತ್ಯಾಗಗಳನ್ನು ಸ್ಮರಿಸೋಣವೆಂದು ಕಾಸರಗೋಡು ಜಿಲ್ಲಾ ಪಂಚಾಯತಿ ಸದಸ್ಯ ನಾರಾಯಣ ನಾಯ್ಕ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮ ದೇಶದ ಶಾಂತಿಗೆ ಧಕ್ಕೆ ತರುವ ಯಾವುದೇ ಶಕ್ತಿಗಳ ವಿರುದ್ಧ ಹೋರಾಡುವ ಮನಸ್ಸು ವಿದ್ಯಾರ್ಥಿಗಳಲ್ಲಿರಬೇಕೆಂದು ಶಾಲಾ ರಕ್ಷಕ ಶಿಕ್ಷಕ ಅಧ್ಯಕ್ಷರಾದ ಶಶಿಧರ್ ಅವರು ಹೇಳಿದರು.
2022 -23 ನೇ ಶೈಕ್ಷಣಿಕ ವರ್ಷದ ಎಸ್ .ಎಸ್ .ಎಲ್. ಸಿ, ಪ್ಲಸ್ ಟು ತರಗತಿಗಳಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ಎಲ್ ಎಸ್ ಎಸ್ ಪರೀಕ್ಷೆಯಲ್ಲಿ ಸ್ಕಾಲರ್ಶಿಪ್ ದೊರೆತ ವಿದ್ಯಾರ್ಥಿಗೆ ಪ್ರತಿಭಾ ಪುರಸ್ಕಾರಗಳನ್ನು ವಿತರಿಸಲಾಯಿತು. ವಾರ್ಡು ಸದಸ್ಯ ರಾಮಚಂದ್ರ ಎಂ ಹಾಗೂ ನರಸಿಂಹ ಪೂಜಾರಿಯವರು ಸ್ವಾತಂತ್ರ್ಯ ದಿನಾಚರಣೆಯ ಸಂದೇಶವನ್ನು ಸಾರಿದರು. ಎಂ.ಪಿ.ಟಿ.ಎ ಸದಸ್ಯೆ ಪ್ರೇಮಲತಾ ಉಪಸ್ಥಿತರಿದ್ದರು. ನಿವೃತ್ತ ಅಧ್ಯಾಪಕ ಭಟ್ಯ ಪಟಾಳಿ ಶುಭಹಾರೈಸಿದರು. ರಕ್ಷಕರು ಹಾಗೂ ಅಧ್ಯಾಪಕ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಶಿಕ್ಷಕಿ ಸರಸ್ವತಿ. ಕೆ.ಎನ್ ವಂದಿಸಿದರು. ಅಧ್ಯಾಪಕರಾದ ದಿನೇಶ್ ನಿರೂಪಿಸಿದರು.