HEALTH TIPS

₹7,800 ಕೋಟಿ ಮೌಲ್ಯದ ಸೇನಾ ಪರಿಕರ ಖರೀದಿಗೆ ರಕ್ಷಣಾ ಖರೀದಿ ಮಂಡಳಿ ಒಪ್ಪಿಗೆ

             ವದೆಹಲಿ: ಸೇನೆಯ ಶಸ್ತ್ರಾಸ್ತ್ರ ಕಾರ್ಯಾಚರಣೆಯ ಸಾಮರ್ಥ್ಯವನ್ನು ವೃದ್ಧಿಸುವ ಕ್ರಮವಾಗಿ ₹ 7,800 ಕೋಟಿ ಮೌಲ್ಯದ ಶಸ್ತ್ರಾಸ್ತ್ರ, ಪರಿಕರಗಳ ಖರೀದಿಗೆ ರಕ್ಷಣಾ ಸಚಿವಾಲಯದ ರಕ್ಷಣಾ ಖರೀದಿ ಮಂಡಳಿಯು (ಡಿಎಸಿ) ಗುರುವಾರ ಅನುಮೋದನೆ ನೀಡಿದೆ.

             ಎಂಐ-17 ವಿ5 ಹೆಲಿಕಾಪ್ಟರ್‌ಗಳಲ್ಲಿ ಬ್ಯಾಟರಿ ಬಾಳಿಕೆ ಅವಧಿಯನ್ನು ವೃದ್ಧಿಸುವ, ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ ಸಂಸ್ಥೆಯು ಅಭಿವೃದ್ಧಿ ಪಡಿಸಿರುವ ವಿದ್ಯುನ್ಮಾನ ವಾರ್‌ಫೇರ್‌ ಸ್ಯೂಟ್ ಕೂಡಾ ಈ ಪರಿಕರಗಳಲ್ಲಿ ಪ್ರಮುಖವಾಗಿ ಸೇರಿದೆ.

            ನೆಲದಲ್ಲಿ ಕಾರ್ಯಾಚರಣೆ ನಡೆಸುವ ಯಾಂತ್ರಿಕೃತ ಇನ್‌ಫೆಂಟ್ರಿ ಮತ್ತು ಶಸ್ತ್ರಸಜ್ಜಿತ ರೆಜಿಮಂಟ್‌ಗಳಿಗಾಗಿ ಮೊದಲ ಹಂತದಲ್ಲಿ ಸೇನಾ ಪರಿಕರ ಖರೀದಿಸುವ ಪ್ರಸ್ತಾವಕ್ಕೂ ಡಿಎಸಿ ಅನುಮೋದನೆ ನೀಡಿದೆ. ಮಾನವರಹಿತ ಕಣ್ಗಾವಲು ವ್ಯವಸ್ಥೆ, ಶಸ್ತ್ರಾಸ್ತ್ರಗಳ ಸಾಗಣೆ- ವಿತರಣೆ ಚಟುವಟಿಕೆ ಹಾಗೂ ಇಂಧನ, ಬಿಡಿಭಾಗಗಳ ಖರೀದಿ ಇದರಲ್ಲಿ ಸೇರಿದೆ.

             7.62x51 ಎಂ.ಎಂ ಹಗುರ ಮಷಿನ್‌ ಗನ್‌ಗಳು, ನೌಕಾಪಡೆಗೆ ಬಳಸಲು ಎಂಎಚ್‌-60ಆರ್‌ ಹೆಲಿಕಾಪ್ಟರ್‌ಗಳಿಗಾಗಿ ಶಸ್ತ್ರಾಸ್ತ್ರಗಳ ಖರೀದಿ, ಯಾಂತ್ರಿಕೃತ ಪಡೆಗಳ ಕ್ಷಿಪ್ತ ಚಲನೆಗಾಗಿ ಒತ್ತು ನೀಡುವ ಬ್ರಿಜ್‌ ಲೇಯಿಂಗ್‌ ಟ್ಯಾಂಕ್‌ಗಳ ಖರೀದಿಯೂ ಇದರಲ್ಲಿ ಸೇರಿದೆ.

             ಪ್ರಾಜೆಕ್ಟ್ ಶಕ್ತಿ ಯೋಜನೆಯಡಿ ಲ್ಯಾಪ್‌ಟಾಪ್‌ ಮತ್ತು ಟ್ಯಾಬ್ಲೆಟ್‌ಗಳ ಖರೀದಿಗೂ ಡಿಎಸಿ ಸಮ್ಮತಿಸಿದೆ. ಈ ಎಲ್ಲವನ್ನು ದೇಶೀಯ ಉತ್ಪಾದಕರಿಂದಲೇ ಖರೀದಿಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries