HEALTH TIPS

ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 80ಕ್ಕೂ ಹೆಚ್ಚು ಗರ್ಭಿಣಿಯರಿಗೆ ತಗುಲಿದ ಏಡ್ಸ್​ ಸೋಂಕು

             ಖನೌಹೆಚ್​ಐವಿ ಏಡ್ಸ್​ ರೋಗ ಒಂದು ರೆಟ್ರೋ ವೈರಸ್​ ಆಗಿದ್ದು, 1930ರ ದಶಕದಲ್ಲಿ ಪಶ್ಚಿಮ ಆಫ್ರಿಕಾದ ಚಿಂಪಾಜಿಗಳಲ್ಲಿ ಮೊದಲು ಕಾಣಿಸಿಕೊಂಡಿತ್ತು. ಈ ರೋಗವು ಚಿಂಪಾಂಜಿಗಳನ್ನು ಬೇಟೆಯಾಡುವ ವೇಳೆ ರಕ್ತ ವರ್ಗಾವಣೆಯ ಮೂಲಕ ಮನುಷ್ಯರಲ್ಲೂ ಸಹ ಕಾಣಿಸಿಕೊಂಡಿತ್ತು.

               ನಂತರದ ದಶಕಗಳಲ್ಲಿ ಆಫ್ರಿಕಾ ಸೇರಿದಂತೆ ವಿಶ್ವದ ಇತರೆ ಭಾಗಗಳಲ್ಲೂ ಸಹ ಈ ವೈರಸ್​ ಹರಡಲು ಶುರುವಾಯಿತು ಎಂದು ಹೇಳಲಾಗಿದೆ. ಅನೇಕ ಮಹಿಳೆಯರು ಈ ವೈರಸ್ ಸೋಂಕಿಗೆ ಒಳಗಾಗಿದ್ದಾರೆ ಮತ್ತು ಇದು ಗರ್ಭಾವಸ್ಥೆಯಲ್ಲಿ ಮತ್ತು ಹೆರಿಗೆಯ ಸಮಯದಲ್ಲಿ ಶಿಶುಗಳಿಗೆ ವರ್ಗಾವಣೆಯಾಗುತ್ತದೆ.

                                         81 ಮಂದಿಗೆ ಸೋಂಕು

              ಇದೀಗ ಘಟನೆಯೊಂದರಲ್ಲಿ 81ಕ್ಕೂ ಹೆಚ್ಚು ಗರ್ಭಿಣಿಯರು ಹೆಚ್​ಐವಿ ಏಡ್ಸ್​ ಸೋಂಕಿಗೆ ತುತ್ತಾಗಿರುವ ಘಟನೆ ಉತ್ತರಪ್ರದೇಶದ ಮೀರತ್​ನಲ್ಲಿ ಬೆಳಕಿಗೆ ಬಂದಿದೆ. ಕಳೆದ 16 ತಿಂಗಳ ಅಂತರದಲ್ಲಿ ಗರ್ಭಿಣಿಯರಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಂಡಿದೆ. ಆರೋಗ್ಯ ಇಲಾಖೆಯೂ ಈ ಸಂಬಂಧ ಸೋಂಕಿತ ಗರ್ಭಿಣಿಯರ ಮೇಲೆ ತೀವ್ರ ನಿಗಾ ವಹಿಸಿದೆ ಎಂದು ವೈದ್ಯರೊಬ್ಬರು ತಿಳಿಸಿದ್ದಾರೆ.

              ಮೀರತ್​ನ ಲಾಲಾ ಲಜ​ಪತ್​ ರಾಯ್​ ಮೆಡಿಕಲ್​ ಕಾಲೇಜಿನ ಆಯಂಟಿ ರೆಟ್ರೋ ವೈರಸ್(ATR)​ ಥೆರಪಿ ಕೇಂದ್ರ ನೀಡಿದ ವರದಿ ಆಧಾರದ ಮೇಲೆ ಗರ್ಭಿಣಿಯರು ಸೋಂಕಿಗೆ ತುತ್ತಾಗಿರುವುದು ಬೆಳಕಿಗೆ ಬಂದಿದೆ. 81 ಗರ್ಭಿಣಿಯರನ್ನು ಆಯಂಟಿ ರೆಟ್ರೋ ಥೆರಪಿಗೆ ಒಳಪಡಿಸಿದಾಗ ಅವರಿಗೆ ಸೋಂಕು ದೃಢಪಟ್ಟಿದೆ.

                                  ಸೂಜಿಗಳಿಂದ ಹರಡಿರಬಹುದು

                2022-23ರ ಅವಧಿಯಲ್ಲಿ ಈ ಸೋಂಕು ಮಹಿಳೆಯರಿಗೆ ಹೆಚ್ಚಾಗಿ ತಗುಲಿದ್ದು, ಗರ್ಭಿಣೀಯರಿಗೆ ಹಾಗೂ ಬಾಣಂತಿಯರಿಗೆ ಸರ್ಕಾರದ ವತಿಯಿಂದ ಚಿಕಿತ್ಸೆ ನೀಡಲಾಗುತ್ತಿದೆ. ಜನಿಸಿರುವ ಮಕ್ಕಳಿಗೆ 18ತಿಂಗಳೂ ಪೂರ್ಣಗೊಂಡ ನಂತರ ಹೆಚ್​ಐವಿ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ನೋಡಲ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

                    ಮಹಿಳೆಯರಿಗೆ ಸೋಂಕು ಹೇಗೆ ತಗುಲಿತು ಎಂಬ ಬಗ್ಗೆ ಮಾಹಿತಿ ನಮ್ಮಲಿಲ್ಲ. ಈ ಸಂಬಂಧ ಆರೋಗ್ಯ ಇಲಾಖೆ ವತಿಯಿಂದ ತಂಡ ಒಂದನ್ನು ರಚಿಸಲಾಗಿದ್ದು, ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಸೋಂಕು ಸಂಬೋಗ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಚುಚ್ಚುವ ಸೂಜಿಗಳಿಂದ ಹರಡಿರಬಹುದು ಎಂಬ ಶಂಕೆಯಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಅಖಿಲೇಶ್​ ಮೋಹನ್​ ಪ್ರಸಾದ್​ ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries