HEALTH TIPS

ಒಂದೇ ಹಾಸ್ಟೆಲ್​ನ 89 ವಿದ್ಯಾರ್ಥಿನಿಯರು ನಾಪತ್ತೆ; ಬೆಳಕಿಗೆ ಬಂದದ್ದು ಹೇಗೆ?

              ಖನೌಸರ್ಕಾರದ ಅಧೀನದಲ್ಲಿರುವ ಬಾಲಕಿಯರ ಹಾಸ್ಟೆಲ್​ನಲ್ಲಿ 89 ವಿದ್ಯಾರ್ಥಿನಿಯರು ನಾಪತ್ತೆಯಾಗಿರುವ ಘಟನೆ ಉತ್ತರಪ್ರದೆಶದ ಗೊಂಡ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲಾಧಿಕಾರಿ ಹಾಸ್ಟೆಲ್​ ಮೇಲೆ ದಾಳಿ ನಡೆಸಿದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.

              ಜಿಲ್ಲೆಯ ಪರಸ್​ಪುರದಲ್ಲಿರುವ ಕಸ್ತೂರ್​ಬಾ ಗಾಂಧಿ ಬಾಲಕಿಯರ ಹಾಸ್ಟೆಲ್​ನಲ್ಲಿ 89 ವಿದ್ಯಾರ್ಥಿನಿಯರು ರಾತ್ರಿ ಹೊತ್ತು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.

               ಜಿಲ್ಲಾಧಿಕಾರಿ ನೇಹಾ ಶರ್ಮಾ ಆದೇಶದ ಮೇರೆಗೆ ಪೊಲೀಸರು ಹಾಸ್ಟೆಲ್​ ವಾರ್ಡನ್​ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

              ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ನೇಹಾ ಶರ್ಮಾ ಹಾಸ್ಟೆಲ್​ನಲ್ಲಿ ಒಟ್ಟು 100 ವಿದ್ಯಾರ್ಥಿನಿಯರು ಇರಬೇಕಿತ್ತು. ಆದರೆ, ನಾವು ಭೇಟ ನೀಡಿದ ವೇಳೆ 11 ವಿದ್ಯಾರ್ಥಿನಿಯರು ಹಾಜರಿದ್ದರು. 89 ವಿದ್ಯಾರ್ಥಿನಿಯರು ಇಲ್ಲದೇ ಇರುವ ಬಗ್ಗ ಕೇಳಿದಾಗ ವಾರ್ಡನ್​ ಸರಿತಾ ಸಿಂಗ್​ ಸಹ ಸಮರ್ಕಪವಾದ ಉತ್ತರ ನೀಡಲಿಲ್ಲ.

                    ಇದು ಗಂಭೀರ ರೀತಿಯ ನಿರ್ಲಕ್ಷ್ಯವಾಗಿದ್ದು, ಬಾಲಕಿಯರ ಹಾಸ್ಟೆಲ್​ನಲ್ಲಿ ಈ ರೀತಿ ನಡೆದಿರುವುದು ಕಳವಳಕಾರಿಯಾಗಿದೆ. ಘಟನೆ ಸಂಬಂಧ ಮಹಿಳಾ ವಾರ್ಡನ್​ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಅಧಿಕಾರಿಗಳಿಗೆ ತನಿಖೆ ನಡೆಸುವಂತೆ ಸೂಚಿಸಿದ್ದೇನೆ ಎಂದು ಜಿಲ್ಲಾಧಿಕಾರಿ ನೇಹಾ ಶರ್ಮಾ ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries