ಶ್ರೀನಗರ (PTI): ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿಯ ದಾಲ್ ಸರೋವರದಲ್ಲಿ 'ತಿರಂಗಾ ಶಿಕಾರ' ಯಾತ್ರೆಯನ್ನು ಮಂಗಳವಾರ ನಡೆಸಲಾಯಿತು.
ಶ್ರೀನಗರ (PTI): ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿಯ ದಾಲ್ ಸರೋವರದಲ್ಲಿ 'ತಿರಂಗಾ ಶಿಕಾರ' ಯಾತ್ರೆಯನ್ನು ಮಂಗಳವಾರ ನಡೆಸಲಾಯಿತು.
ದೆಹಲಿ ಮೂಲದ ಸರ್ಕಾರೇತರ ಸಂಸ್ಥೆ (ಎನ್‌ಜಿಒ) 'ಸಲ್ಯೂಟ್ ತಿರಂಗಾ' ಈ ಯಾತ್ರೆ ಆಯೋಜಿಸಿತ್ತು.
ಇದರಲ್ಲಿ ಸುಮಾರು 150 ಜನರು ಭಾಗವಹಿಸಿದ್ದರು. ನೆಹರು ಉದ್ಯಾನದಿಂದ ಆರಂಭವಾದ ಯಾತ್ರೆ ಶೇರಿ ಕಾಶ್ಮೀರ್ ಇಂಟರ್‌ನ್ಯಾಷನಲ್ ಕನ್ವೆಂಷನ್ ಸೆಂಟರ್‌ನಲ್ಲಿ (ಎಸ್‌ಕೆಐಸಿಸಿ) ಕೊನೆಗೊಂಡಿತು.
ಜಮ್ಮು ಮತ್ತು ಕಾಶ್ಮೀರದಲ್ಲಿ ಇದೇ ಮೊದಲ ಬಾರಿಗೆ ತಿರಂಗಾ ಶಿಕಾರ ಯಾತ್ರೆ ಕೈಗೊಂಡಿರುವುದು. ಪ್ರಧಾನಿ ನರೇಂದ್ರ ಮೋದಿ ಅವರ 'ಹರ್ ಘರ್ ತಿರಂಗಾ' (ಪ್ರತಿ ಮನೆಯಲ್ಲೂ ತಿರಂಗಾ) ಘೋಷಣೆಯಡಿ ಕೇಂದ್ರಾಡಳಿತ ಪ್ರದೇಶದ ಯುವಕರು ಈ ಯಾತ್ರೆ ಕೈಗೊಂಡಿದ್ದಾರೆ. ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಆಗಸ್ಟ್ 15ರ ವರೆಗೆ ಯಾತ್ರೆ ನಡೆಯಲಿದೆ ಎಂದು ಜಮ್ಮು ಮತ್ತು ಕಾಶ್ಮೀರ ಸಲ್ಯೂಟ್ ತಿರಂಗಾದ ಅಧ್ಯಕ್ಷ ಮುಜಾಫ್ರರ್ ಹುಸೇನ್ ಕಲಾಲ್ ತಿಳಿಸಿದ್ದಾರೆ.
ಯಾತ್ರೆಯಲ್ಲಿ ಭಾಗವಹಿಸಿದ್ದಕ್ಕೆ ಯುವಜನರಿಗೆ ಅವರು ಧನ್ಯವಾದ ಹೇಳಿದ್ದಾರೆ.
ಇದೇ ರೀತಿಯ ಕಾರ್ಯಕ್ರಮವನ್ನು ಜಮ್ಮುವಿನಲ್ಲೂ ನಡೆಸಲು ನಿರ್ಧರಿಸಿದ್ದೇವೆ ಎಂದು ಅವರು ತಿಳಿಸಿದರು.