ಮಂಜೇಶ್ವರ:ಚಿಣ್ಣರ ಚಿಲುಮೆ ಸಂಘಟಕ ಸಮಿತಿಯ ನೇತೃತ್ವದಲ್ಲಿ ಬಾಕುಡ ಸಮಾಜ ಕೇರಳ ಕರ್ನಾಟಕ ಇದರ ಸಹಕಾರದೊಂದಿಗೆ ಆಗಸ್ಟ್ 13 ರಂದು ಬೆಳಿಗ್ಗೆ 9.30 ರಿಂದ ವಿವಿಧ ಸ್ಪರ್ಧಾ ಕಾರ್ಯಕ್ರಮಗಳೊಂದಿಗೆ GLPS ಉದ್ಯಾವರ ಗೇಟ್ ಶಾಲೆಯಲ್ಲಿ ಜರಗಲಿದೆ.
ಇದರಂಗವಾಗಿ ಮಾಡಿದ ಆಮಂತ್ರಣ ಪತ್ರಿಕೆ ಯ ಬಿಡುಗಡೆ ಕಾರ್ಯಕ್ರಮವನ್ನು ದೈವದಪಾತ್ರಿ ಅಡ್ವಕೇಟ್ ಭರತ್ ರಾಜ್ ಅಟ್ಟೆಗೋಳಿ ನೆರವೇರಿಸಿ ಮಾತನಾಡಿ "ಮಕ್ಕಳ ಸೃಜನಾತ್ಮಕ ಚಿಂತನೆಗಳ ಬೆಳವಣಿಗೆ ಹಾಗೂ ರಾಷ್ಟ್ರ ಭಕ್ತಿಯ ಗುಣವನ್ನು ಬೆಳೆಸಲು ವೇದಿಕೆ ಒದಗಿಸಿಕೊಂಡು ಬರುತ್ತಿರುವ ಚಿಣ್ಣರ ಚಿಲುಮೆ ಸಂಘಟನಾ ಸಮಿತಿಯ ಇಂತಹ ಕಾರ್ಯ ಶ್ಲಾಘನೀಯ"ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ರಘುರಾಮ್ ಚತ್ರಂಪಲ್ಲ,ಪ್ರಿಜ್ಜು ಬಳ್ಳಾರ್, ಅಶೋಕ್ ಕೊಡ್ಲಮೊಗರು ಅಜಿತ್ ಮಂಜೇಶ್ವರ ಉಪಸ್ಥಿತರಿದ್ದರು. ರಾಜೇಶ್ ಕೊಡ್ಲಮೊಗರು ಸ್ವಾಗತಿಸಿ ಪವನ್ ಹೊಸಂಗಡಿ ವಂದಿಸಿದರು.