ನವದೆಹಲಿ: ಲ್ಯಾಪ್‌ಟಾಪ್ ಮತ್ತು ಕಂಪ್ಯೂಟರ್ ಸೇರಿದಂತೆ ಇತರ ಗ್ಯಾಜೆಟ್ಗಳ ಆಮದು ನಿರ್ಬಂಧ ಬಗ್ಗೆ ವಿರೋಧ ಕೇಳಿಬರುತ್ತಿದ್ದಂತೆ ಮತ್ತು ಬೆಲೆ ಏರಿಕೆ, ಕೊರತೆ ಭೀತಿ ಹಿನ್ನಲೆಯಲ್ಲಿ ತನ್ನ ಆದೇಶವನ್ನು ಕೇಂದ್ರ ಸರ್ಕಾರ ಹಿಂಪಡೆದಿದ್ದು, ಕೆಲವು ನಿರ್ಬಂಧಗಳನ್ನು ಸಡಿಲಿಸಲಾಗಿದೆ.
ಮೂಲಗಳ ಪ್ರಕಾರ ನಿರ್ಬಂಧದ ಆದೇಶವನ್ನು ಸುಮಾರು ಮೂರು ತಿಂಗಳ ವರೆಗೆ (ಅಕ್ಟೋಬರ್ 31) ಸರ್ಕಾರ ಮುಂದೂಡಿದ್ದು ಈ ಕ್ರಮವು ಎಲೆಕ್ಟ್ರಾನಿಕ್ ಕಂಪನಿಗಳಿಗೆ ಪರವಾನಗಿ ಇಲ್ಲದೆ ಗ್ಯಾಜೆಟ್ಗಳನ್ನು ಆಮದು ಮಾಡಿಕೊಳ್ಳಲು ಹೆಚ್ಚಿನ ಸಮಯ ನೀಡಲಿದೆ. ಈ ಕಂಪನಿಗಳು ನವೆಂಬರ್ 1ರಿಂದ ಈ ಸಾಧನಗಳನ್ನು ಆಮದು ಮಾಡಿಕೊಳ್ಳಲು ಸರ್ಕಾರದಿಂದ ಪರವಾನಗಿಯನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಲಾಗಿದೆ.
ಆಗಸ್ಟ್ 4ರಂದು ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಮತ್ತು ಪರ್ಸನಲ್ ಕಂಪ್ಯೂಟರ್‌ಗಳ ಆಮದು ನಿರ್ಬಂಧ ತಕ್ಷಣವೇ ಜಾರಿಗೆ ಬರುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಪರವಾನಗಿ ಇದ್ದರೆ ಮಾತ್ರ ಇವುಗಳ ಆಮದಿಗೆ ಅನುಮತಿ ನೀಡಿತ್ತು. HSN 8741 ಅಡಿಯಲ್ಲಿ ಬರುವ ಸರ್ವರ್, ಲ್ಯಾಪ್‌ಟಾಪ್, ಟ್ಯಾಬ್ಲೆಟ್‌ಗಳು, ಆಲ್-ಇನ್-ಒನ್ ಪರ್ಸನಲ್ ಕಂಪ್ಯೂಟರ್‌ಗಳು ಮತ್ತು ಅಲ್ಟ್ರಾ ಸ್ಮಾಲ್ ಫಾರ್ಮ್ ಫ್ಯಾಕ್ಟರ್ ಕಂಪ್ಯೂಟರ್‌ಗಳ ಆಮದನ್ನು ನಿಷೇಧಿಸಲಾಗಿತ್ತು. ಸರ್ಕಾರದ ನಿರ್ಧಾರದಿಂದ ಈ ಸರಕುಗಳ ಪೂರೈಕೆಯಲ್ಲಿ ಸಂಭವನೀಯ ಅಡ್ಡಿಗಳ ಬಗ್ಗೆ ಕಳವಳವನ್ನು ಸೃಷ್ಟಿಸಿತ್ತು. ಮತ್ತು ಹಬ್ಬದ ಸೀಸನ್‌ಗೂ ಮುನ್ನ ಬೆಲೆ ಏರಿಕೆಯಾಗುವ ಆತಂಕವೂ ಇತ್ತು. ಇದೀಗ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ, ಕೊರತೆ ಭೀತಿ ಕುರಿತು ತಜ್ಞರು ಆತಂಕ ವ್ಯಕ್ತಪಡಿಸಿದ ಬೆನ್ನಲ್ಲೇ ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ಪರಿಷ್ಕರಿಸಿದೆ.
DGFT ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಿದ ನಂತರ 10-15 ನಿಮಿಷಗಳಲ್ಲಿ ಕಂಪನಿಗಳು ಪರವಾನಗಿ ಪಡೆಯುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದು, ಒಂದು ಕಂಪನಿಯು ವಿವಿಧ ಶಾಖೆಗಳು ಮತ್ತು ನಗರಗಳೊಂದಿಗೆ ಅನೇಕ ಪರವಾನಗಿಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ಹೇಳಿದ್ದಾರೆ.
ಲ್ಯಾಪ್‌ಟಾಪ್ ಮತ್ತು ಟ್ಯಾಬ್ಲೆಟ್‌ಗಳ ಆಮದುಗಳಿಗೆ ಸಂಬಂಧಿಸಿದ ಹೊಸ ನಿಯಮಗಳು ಜಾರಿಗೆ ಬರಲು ಕಾಲಾವಕಾಶವಿದೆ. ನಿಖರವಾದ ದಿನಾಂಕವನ್ನು ಶೀಘ್ರದಲ್ಲೇ ತಿಳಿಸಲಾಗುವುದು. ಈ ಸರಕುಗಳ ಬೆಲೆಗಳು - ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು, ಪರ್ಸನಲ್ ಕಂಪ್ಯೂಟರ್‌ಗಳು ಇತ್ಯಾದಿಗಳು ಏರಿಕೆಯಾಗುವುದಿಲ್ಲ ಮತ್ತು ಸಾಗಣೆಯಲ್ಲಿ ಸರಕುಗಳಿಗೆ ಯಾವುದೇ ಅಡ್ಡಿಯಾಗುವುದಿಲ್ಲ ಎಂದು ಉಪ ಐಟಿ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
Q: Why has the @GoI_MeitY finalized new norms for import of IT hardware like Laptops, Servers etc?
— Rajeev Chandrasekhar (@Rajeev_GoI) August 4, 2023
Ans: There will be a transition period for this to be put into effect which will be notified soon.
Pls read https://t.co/u5436EA0IG
ಅಂತೆಯೇ “ಇದು ಪರವಾನಗಿ ರಾಜ್‌ಗೆ ಸಂಬಂಧಿಸಿದ್ದಲ್ಲ. ಇದು ವಿಶ್ವಾಸಾರ್ಹ ಮತ್ತು ಪರಿಶೀಲಿಸಬಹುದಾದ ವ್ಯವಸ್ಥೆಗಳನ್ನು ಖಚಿತಪಡಿಸಿಕೊಳ್ಳಲು ಆಮದುಗಳನ್ನು ನಿಯಂತ್ರಿಸುವುದು ಮತ್ತು ಆಮದು ಮಾಡಿಕೊಳ್ಳುವ ಅಥವಾ ದೇಶೀಯವಾಗಿ ತಯಾರಿಸಿದ ವಿಶ್ವಾಸಾರ್ಹ ವ್ಯವಸ್ಥೆಗಳು/ಉತ್ಪನ್ನಗಳನ್ನು ಮಾತ್ರ ವಿಶ್ವಾಸಾರ್ಹ ಮತ್ತು ಪರಿಶೀಲಿಸಿದ ವ್ಯವಸ್ಥೆಗಳನ್ನು ಭಾರತದ ಟೆಕ್ ಪರಿಸರ ವ್ಯವಸ್ಥೆಯು ಬಳಸುತ್ತದೆ ಎಂದು ಖಚಿತಪಡಿಸುತ್ತದೆ ಎಂದು ರಾಜೀವ್ ಚಂದ್ರಶೇಖರ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಆಮದು ಪರವಾನಗಿಬೃಹತ್ ಆಮದಿಗಾಗಿ ಪರವಾನಗಿಯ ಅವಶ್ಯಕತೆ ಇದ್ದು, ಇದು ನವೆಂಬರ್ 1 ರಿಂದ ಜಾರಿಗೆ ಬರಲಿದೆ. ಲ್ಯಾಪ್‌ಟಾಪ್‌ಗಳ ಆಮದಿನ ಮೇಲೆ ಸರ್ಕಾರ ನಿರ್ಬಂಧಗಳನ್ನು ಪ್ರಕಟಿಸಿದೆ. DGFT ಮಾರ್ಗಸೂಚಿಯ ಪ್ರಕಾರ, ಅಕ್ಟೋಬರ್ 31 ರವರೆಗೆ ಮಾನ್ಯ ಪರವಾನಗಿ ಅಗತ್ಯವಿಲ್ಲದೇ ಈ ಸಾಧನಗಳ ಆಮದು ಮಾಡಿಕೊಳ್ಳಬಹುದು.