HEALTH TIPS

ನಿಲ್ಲದ ರೀಲ್ಸ್​ ಸ್ಟಾರ್​ ವಿನೀತನ ಪುಂಡಾಟ: ಮೊದಲು ರೇಪ್​, ನಂತ್ರ ಸುಲಿಗೆ, ಇದೀಗ ಚಿನ್ನಾಭರಣ ಪಡೆದು ಅತ್ಯಾಚಾರ

            ತಿರುವನಂತಪುರ: ಅತ್ಯಾಚಾರ ಪ್ರಕರಣದಲ್ಲಿ ಬಂಧನವಾಗಿ, ಕೆಲ ದಿನಗಳ ಕಾಲ ಜೈಲು ವಾಸ ಅನುಭವಿಸಿ, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಕೇರಳದ ಇನ್​ಸ್ಟಾಗ್ರಾಂ ಸೆಲೆಬ್ರಿಟಿ ಹಾಗೂ ರೀಲ್ಸ್​ ಸ್ಟಾರ್​ ವಿನೀತ್​, ಇದೀಗ ಮತ್ತೊಮ್ಮೆ ಬಂಧನಕ್ಕೊಳಗಾಗಿದ್ದಾನೆ.

             ಯುವತಿಯೊಬ್ಬಳು ನೀಡಿದ ದೂರಿನ ಆಧಾರದ ಮೇಲೆ ವಿನೀತ್​ನನ್ನು ಬಂಧಿಸಲಾಗಿದೆ.

ಚಿನ್ನಾಭರಣಗಳನ್ನು ಪಡೆದುಕೊಂಡು ದೈಹಿಕ ದೌರ್ಜನ್ಯ ಎಸಗಿದ್ದಾನೆ ಎಂದು ಸಂತ್ರಸ್ತೆ ಆರೋಪ ಮಾಡಿದ್ದಾಳೆ. ಈ ಘಟನೆ ಶನಿವಾರ ಸಂಜೆ ನಡೆದಿದೆ.

             ಇನ್​ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದ ತಿರುವನಂತಪುರಂ ಮೂಲದ ಸಂತ್ರಸ್ತೆಯ ಬಳಿ ಆರೋಪಿ ವಿನೀತ್​, ಆರು ಸವರನ್​ ಚಿನ್ನವನ್ನು ಪಡೆದುಕೊಂಡಿದ್ದ. ಅದನ್ನು ಹಿಂತಿರುಗಿಸುವಂತೆ ಸಂತ್ರಸ್ತೆ ಒತ್ತಾಯ ಮಾಡಿದ್ದಳು. ಆಕೆಗೆ ಕಾಲ್​ ಮಾಡಿ, ತಾನಿರುವಲ್ಲಿಗೆ ಬಂದರೆ ಆಭರಣಗಳನ್ನು ಮರಳಿಸುವುದಾಗಿ ಹೇಳಿದ್ದ.

               ವಿನೀತ್​ನ ಮಾತು ನಂಬಿದ ಸಂತ್ರಸ್ತೆ ಕಿಲಿಮನೂರಿಗೆ ತೆರಳಿದಳು. ಅಲ್ಲಿಗೆ ಬಂದ ವಿನೀತ್​, ಆಕೆಯನ್ನು ಬೈಕ್​ನಲ್ಲಿ ಕೂರಿಸಿಕೊಂಡು, ಮನೆಗೆ ಕರೆದೊಯ್ದು ಅತ್ಯಾಚಾರ ಮಾಡಿದ್ದಾನೆ. ಇದಾದ ಬಳಿಕ ಸಂತ್ರಸ್ತೆ ಕಿಲಿಮನೂರ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದು, ಇದೀಗ ವಿನೀತ್​ನನ್ನು ಪೊಲೀಸರು ಮತ್ತೆ ಬಂಧಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries