ಪೆರ್ಲ: ಬಜಕೂಡ್ಲು 'ಅಮೃತದೀಪ ಕೆಸರ್ ಕಂಡ ಉಚ್ಛಯ-2023'ಸಮಿತಿ ವತಿಯಿಂದ ಎರಡನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟ ಆ. 13ರಂದು ಪೆರ್ಲ ಸನಿಹದ ಬಜಕೂಡ್ಲು ಅನೊರ್ದಿ ಗದ್ದೆಯಲ್ಲಿ ಜರುಗಲಿದ್ದು,ಆ ಮಂತ್ರಣಪತ್ರಿಕೆ ಬಿಡುಗಡೆ ಸಮಾರಂಭ ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ನೆರವೇರಿತು.
ಎಡನಾಡು ಕಣ್ಣೂರು ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕ ಜನಾರ್ದನ ಪೂಜಾರಿ ಕಣ್ಣೂರು ಆಮಂತ್ರಣಪತ್ರಿಕೆ ಬಿಡುಗಡೆಗೊಳಿಸಿದರು. ಈ ಸಂದರ್ಭ ಮಾತನಾಡಿದ ಅವರು ಸಮಾಜದ ಅಶಕ್ತ ಬಂಧುಗಳಿಗೆ ಸಹಾಯ ಒದಗಿಸುತ್ತಿರುವ ಅಮೃತದೀಪ ಸಂಘಟನೆ ನಡೆಸುತ್ತಿರುವ ಸಮಾಜಮುಖಿ ಚಟುವಟಿಕೆಗಳಿಗೆ ಇಂತಹ ಕ್ರೀಡಾಕೂಟ ಮತ್ತಷ್ಟು ಪ್ರೇರಣೆ ನೀಡಲಿ ಎಂದು ಹಾರೈಸಿದರು.
ಹಿರಿಯ ಸದಸ್ಯ ಮಹಾಬಲ ರೈ ಬಜಕೂಡ್ಲು ಅವರಿಗೆ ಆಮಂತ್ರಣ ಪತ್ರಿಕೆ ಹಸ್ತಾಂತರಿಸುವ ಮೂಲಕ ಬಿಡುಗಡೆಗೊಳಿಸಲಾಯಿತು. ಎಣ್ಮಕಜೆ ಗ್ರಾಮ ಪಂಚಾಯಿತಿ ಸದಸ್ಯೆ ಉಷಾಗಣೇಶ್, ಮಹೇಶ್ವರಿ ಮಹಿಳಾ ಸಮಾಜದ ನಳಿನಿ ರೈ, ಅಮೃತದೀಪ ಕೆಸರುಗದ್ದೆ ಉತ್ಸವ ಸಮಿತಿ ಪದಾಧಿಕಾರಿಗಳಾದ ಸದಾಶಿವ ಭಟ್ ಹರಿನಿಲಯ, ಚಂದ್ರಶೇಖರ ಆಚಾರ್ಯ, ಉದಯ ಚೆಟ್ಟಿಯಾರ್ ಬಜಕೂಡ್ಲು, ಪದ್ಮನಾಭ ಸುವರ್ಣ, ಶ್ರೀ ಮಹಾಲಿಂಗೇಶ್ವರ ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್ ಅಧ್ಯಕ್ಷ ಸುಜಿತ್ ರೈ ಮೊದಲಾದವರು ಉಪಸ್ಥಿತರಿದ್ದರು.