ಉಪ್ಪಳ: ಮುಳಿಂಜ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಭ್ರಮದ 76ನೇ ಸ್ವಾಸ್ವಾತಂತ್ರ್ಯೋತ್ಸವ ಜರಗಿತು. ಶಾಲಾ ಮುಖ್ಯೋಪಾಧ್ಯಾಯಿನಿ ಚಿತ್ರಾವತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಮಂಗಲ್ಪಾಡಿ ಗ್ರಾಮ ಪಂಚಾಯತಿ ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷೆ ಇರ್ಫಾನ ಇಕ್ಬಾಲ್ ಧ್ವಜಾರೋಹಣಗೈದರು. ಸಭಾ ಕಾರ್ಯಕ್ರದ ಅಧ್ಯಕ್ಷತೆಯನ್ನು ಶಾಲಾ ಪಿ.ಟಿ.ಎ ಅಧ್ಯಕ್ಷ ಇಬ್ರಾಹಿಂ ಹನೀಫಿ ವಹಿಸಿದರು. ಬಿ.ಆರ್.ಸಿ ತರಬೇತುದಾರೆ ಸುಮಾದೇವಿ, ಶಾಲಾ ಪಿ.ಟಿ.ಎ ಉಪಾಧ್ಯಕ್ಷ ಉಮ್ಮರ್ ಫಾರೂಖ್, ಎಂ.ಪಿ.ಟಿ ಉಪಾಧ್ಯಕ್ಷೆ ಉಷಾ ಶುಭಾಶಂಸನೆಗೈದರು.
ಶಾಲಾ ಮಕ್ಕಳಿಂದ ಭಾಷಣ, ದೇಶ ಭಕ್ತಿಗೀತೆ, ರಾಷ್ಟ್ರೀಯ ನಾಯಕರುಗಳ ಛದ್ಮವೇಷ ನೃತ್ಯಗಳು ನಡೆದವು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ನೀಡಲಾಯಿತು. ಅರಬಿಕ್ ಅಲ್ ಮಾಹಿರ್ ಸ್ಕಾಲರ್‍ಶಿಫ್ ಪರೀಕ್ಷೆಯಲ್ಲಿ ವಿಜೇತರಾದ ಮಕ್ಕಳಿಗೆ ಸ್ಮರಣಿಕೆ ಹಾಗು ನಗದು ನೀಡಲಾಯಿತು. ಮುಖ್ಯೋಪಾಧ್ಯಾಯಿನಿ ಚಿತ್ರಾವತಿ ರಾವ್ ಸ್ವಾಗತಿಸಿ, ಹಿರಿಯ ಆಧ್ಯಾಪಕ ಇಸ್ಮಾಯಿಲ್ ವಂದಿಸಿದರು. ಅಧ್ಯಾಪಕ ಅಬ್ದುಲ್ ಬಶೀರ್ ನಿರೂಪಿಸಿದರು. ಅಬ್ಸ. ಎಸ್, ರೇವತಿ, ಧನ್ಯ, ಫಾತಿಮತ್ ಫಝೀನ, ಜಮೀಲ ರಿಯಾಝ ಸಹಕರಿಸಿದರು. ವಿವಿಧ ಸಂಘ ಸಂಸ್ಥೆಗಳ ಕಾರ್ಯಕರ್ತರು ಭಾಗವಹಿಸಿದ್ದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.